ಚಂದನವನದ ಬ್ಯೂಟಿ ಕ್ವೀನ್ ರಮ್ಯಾ ಉತ್ತರಕಾಂಡದ ಮೂಲಕ ಮತ್ತೆ ಬೆಳ್ಳಿ ತೆರೆಗೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಅಭಿಮಾನಿಗಳ ಆಸೆ ಈಗ ಮತ್ತೆ ಹುಸಿಯಾಗಿದೆ.
ಡೇಟ್ಸ್ ಹೊಂದಾಣಿಕೆಯಾದ ಹಿನ್ನೆಲೆಯಲ್ಲಿ ಅವರು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ. ಆದರೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಚಿತ್ರದಲ್ಲಿ ನಟಿ ರಮ್ಯಾ, ಡಾಲಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಹಿಂದಿನ ವರ್ಷವೇ ಈ ಕುರಿತು ಅಪ್ಡೇಟ್ ಸಿಕ್ಕಿತ್ತು. ಅಭಿಮಾನಿಗಳು ಕೂಡ ಸಂತಸ ಪಟ್ಟಿದ್ದರು. ಆದರೆ ಸದ್ಯ ರಮ್ಯಾ ಚಿತ್ರದಿಂದ ಹೊರ ನಡೆದಿದ್ದಾರೆ.