ಬೆಂಗಳೂರು: ಮಹಿಳೆಯೊಬ್ಬರು ಎಎಸ್ ಐಗೆ ಬಾಟಲ್ ನಿಂದ ಇರಿದ ಘಟನೆ ನಡೆದಿದೆ.
ಈ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ನಾಗರಾಜ್ ದಾಳಗೊಳಗಾದ ಎಎಸ್ಐ.
ಅಶ್ವಿನಿ ಎಂಬ ಮಹಿಳೆ ಬಾಟಲ್ ನಿಂದ ಇರಿದಿದ್ದಾರೆ ಎನಾನಲಾಗಿದೆ. ಈ ಘಟನೆ ಶನಿವಾರ (ನಿನ್ನೆ) ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಎಎಸ್‌ಐ ನಾಾರಾಜ್ ಅವರ ಬಲಭಾಗದ ಕೈಗೆ ಗಾಯವಾಗಿದೆ. ಜಾಗದ ವಿಚಾರಕ್ಕೆ ನ್ಯಾಯ ಸಿಗದ್ದಕ್ಕೆ ಠಾಣೆ ಒಳಗಡೆ ಹೋಗಿದ್ದ ಮಹಿಳೆ ಆಕ್ರೋಶದಲ್ಲಿ ಬಾಟಲ್ ನಿಂದ ಚುಚ್ಚಿದ್ದಾಳೆ ಎನ್ನಲಾಗಿದೆ. ಹೀಗೆ ಹಲ್ಲೆ ಮಾಡಿರುವ ಮಹಿಳೆಯು ಮಾನಸಿಕ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.