ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ್ದಾರೆ.
ಉದ್ಧವ್ ನಮ್ಮನ್ನು ಕಸದಂತೆ, ಮನೆಯ ಕೆಲಸಗಾರರಂತೆ ಕಾಣುತ್ತಿದ್ದರು. ಶಿವಸೇನೆಯಲ್ಲಿ ಮಾಲಿಕ ಅಥವಾ ಸೇವಕನೆಂಬ ಪರಿಕಲ್ಪನೆ ಇಲ್ಲ ಎಂದು ಹೇಳಿದ್ದಾರೆ. ಉದ್ಧವ್ ಠಾಕ್ರೆಯವರು ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತದಿಂದ ವಿಮುಖರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
2022ರಲ್ಲಿ ಶಿವಸೇನೆಯಿಂದ ಹಲವು ಸಾಸಕರು ಬಂಡಾಯ ಎದ್ದಿದ್ದರು. ಆಗ ಸಿಎಂ ಆಗಿದ್ದ ಉದ್ಧವ್ ಠಾಕ್ರೆ ರಾಜೀನಾಮೆ ನೀಡಬೇಕಾಯಿತು.
ಈಗ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಉದ್ಧವ್ ಕೈಬಿಟ್ಟಿದ್ದರಿಂದ ತಾವು ಬಂಡಾಯವೆದ್ದಿದ್ದಾಗಿ ಶಿಂಧೆ ತಿಳಿಸಿದ್ದಾರೆ. ನಾಯಕರು ಮನೆಯಲ್ಲಿ ಕೂರುವ ಬದಲು ತಳಮಟ್ಟದ ಕಾರ್ಯಕರ್ತರನ್ನು ತಲುಪಿದಾಗ ಪಕ್ಷ ಮುನ್ನಡೆಯುತ್ತದೆ ಎಂದಿರುವ ಅವರು ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.