ಉತ್ತರ ಕನ್ನಡ: ಎಷ್ಟೇ ಕಠಿಣ ಕ್ರಮ ಕೈಗೊಂಡಿದ್ದು, ಬೇಟೆಗಾರರ ಹಾವಳಿ ಹೆಚ್ಚಾಗುತ್ತಲೇ ಇದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ರಾಮಾಪುರದ ಮೊದಲಗೇರಾದಲ್ಲಿ ಜಿಂಕೆ ಭೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ವೇಳೆ ಪೋಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಮೊದಲಗೇರಾ ನಿವಾಸಿಗಳಾದ ಪರಶುರಾಮ ಶಿವಾಜಿ ಕೊಡಗೇಕರ (37 ), ಸುನೀಲ ಮಾವಳು ತುಫಾರಿ (31) ಬಂಧಿತ ಆರೋಪಿಗಳು ಎನ್ನಲಾಗಿದೆ. ಬಂಧಿತರಿಂದ ಒಂಟಿ ನಳಿಕೆಯ ನಾಡ ಬಂದೂಕು, ಜಿಂಕೆ ಮಾಂಸ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಲು ಜಿಂಕೆಯನ್ನು ಬೇಟೆಯಾಡಿ ತಲೆಯ ಭಾಗವನ್ನು ಸುಟ್ಟು, ಇನ್ನುಳಿದ ಮಾಂಸವನ್ನು ಸಮವಾಗಿ ಹಂಚಿಕೊಳ್ಳಲು ಕತ್ತರಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.