ದಾವಣಗೆರೆ: ಜಾತಿಯಲ್ಲಿನ ಅಜ್ಞಾನ ಹೊಗಲಾಡಿಸಿ ಜ್ಞಾನದ ಜ್ಯೋತಿ ಬೆಳಗಿಸುತ್ತಿದ್ದೇವೆ ಎಂದು ರೆಡ್ಡಿಪೀಠದ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಾವು ಜಾತ್ಯಾತೀತ ರಾಷ್ಟ್ರ ಅಂದುಕೊಂಡಿದ್ದೇವೆ. ಶೋಷಿತ ಸಮುದಾಯಕ್ಕೆ ಶಕ್ತಿ ತುಂಬಲು ಎಲ್ಲಾ ಸಮುದಾಯ ವರ್ಗದವರು ಮಠಗಳನ್ನು ಸ್ಥಾಪನೆ ಮಾಡಿಕೊಂಡಿದ್ದಾರೆ ಎಂದಿದ್ಧಾರೆ.
ಮೇಲ್ವರ್ಗದ ಶ್ರೀಗಳು ಕೆಳವರ್ಗದವರನ್ನು ಹತ್ತಿರ ಕರೆದುಕೊಂಡರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ. ನಮ್ಮನ್ನು ಅವರ ಜೊತೆ ಕೂರಿಸಿ ಕೊಳ್ಳುವುದಿಲ್ಲ. ನಮ್ಮ ಸಮುದಾಯದವರನ್ನು ಅವರು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎಂದಿದ್ದಾರೆ