ಕಲಬುರಗಿ: ಜಗಳ ಬಿಡಿಸಲು ಹೋಗಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆಯೇ ಯುವಕರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಆಳಂದ ಹೊರವಲಯದಲ್ಲಿ ನಡೆದಿದೆ. ಆಳಂದ ಪೊಲೀಸ್ ಠಾಣೆ ಪೇದೆ ಗಣಪತರಾವ್ ಘಂಟೆ ಹಲ್ಲೆಗೊಳಗಾದ ಪೇದೆ. ಚಿಲ್ಲಾಳ ಪೆಟ್ರೋಲ್ ಪಂಪ್ ಬಳಿ ಬೊಲೆರೊ ಹಾಗೂ ಆಟೋ ಮಧ್ಯೆ ಅಪಘಾತ ಸಂಭವಿಸಿದೆ. ಈ ಸ್ಥಳದಲ್ಲಿ ನಿಪ್ಪಾಣಿ ತಾಂಡಾ ಗ್ಯಾಂಗ್ ಹೋಗಿ, ಆಟೋದವನ ಜೊತೆ ಜಗಳ ತೆಗೆದಿದೆ. ಈ ವೇಳೆ ಪೊಲೀಸ್ ಪೇದೆ ಅಲ್ಲಿಗೆ ಹೋಗಿದ್ದಾರೆ. ಆಗ ಗುಂಪಿನ ಯುವಕರು ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ. 8 ಜನ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ವಶಕ್ಕೆ ಪಡೆಯಲಾಗಿದ್ದು, 6 ಜನ ಪರಾರಿಯಾಗಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.