ಭಾರತದ ಲೆಜೆಂಡರಿ ನಾಯಕ ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ವಿಶಾಖಪಟ್ಟಣಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 42 ವರ್ಷದ ವಿಕೆಟ್ ಕೀಪರ್ ಧೋನಿ ಅವರು ಕೇವಲ 16 ಎಸೆತಗಳಲ್ಲಿ 37 ರನ್ ಗಳಿಸಿ ಅಜೇಯರಾಗಿ 37 ರನ್ ಗಳಿಸಿದ್ದಾರೆ. ಹೀಗಾಗಿ ತಂಡ ಸೋತರೂ ಅಭಿಮಾನಿಗಳು ಧೋನಿ ಆಟಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಧೋನಿಯ ಈ ಆಟದಲ್ಲಿ ನಾಲ್ಕು ಫೋರ್ ಮತ್ತು ಮೂರು ಸಿಕ್ಸರ್‌ಗಳು ಇದ್ದವು. ಸಿಎಸ್‌ಕೆ ಮಾಜಿ ನಾಯಕ ಗೆಲುವಿಗೆ ಎಷ್ಟೇ ಹೋರಾಡಿದರೂ ಪ್ರಯತ್ನ ವ್ಯರ್ಥವಾಯಿತು, ಕೊನೆಗೆ ತಂಡ 20 ರನ್ ಗಳಿಂದ ಸೋತಿತು. ಕೊನೆಯ ಓವರ್ ನಲ್ಲಿ ಸಿಎಸ್ ಕೆ ಗೆಲುವಿಗೆ 41 ರನ್ ಗಳ ಅಗತ್ಯ ಇತ್ತು. ಡೆಲ್ಲಿ ವೇಗಿ ಅನ್ರಿಚ್ ನಾರ್ಟ್ಜೆ ಬೌಲಿಂಗ್ ನಲ್ಲಿ ಎರಡು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ಧೋನಿ ಮಿಂಚಿದರು. ಎರಡನೇ ಎಸೆತದಲ್ಲಿ ಕೇವಲ ಒಂದೇ ಕೈಯಿಂದ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತು. ಧೋನಿಯ ಒನ್ ಹ್ಯಾಂಡ್ ಸಿಕ್ಸರ್ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
20ನೇ ಓವರ್ ನ ಮೊದಲ ಎರಡು ಎಸೆತಗಳಲ್ಲಿ 10 ರನ್ ಗಳಿಸಿದ ನಂತರ, ಧೋನಿ ಮೂರನೇ ಎಸೆತದಲ್ಲಿ ಯಾವುದೇ ರನ್ ಗಳಿಸಿಲ್ಲ. ನಾಲ್ಕನೇ ಎಸೆತದಲ್ಲಿ ನಾಲ್ಕು ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಆಟ ಮುಗಿಸಿದರು. ಸಿಎಸ್ ಕೆ ಸೋಲಿನ ಹೊರತಾಗಿಯೂ ಧೋನಿ ಹೈಲೇಟ್ ಆದರು. ಸಿಎಸ್‌ಕೆ ಪರ ಮೂರು ಸಿಕ್ಸರ್‌ಗಳನ್ನು ಗಳಿಸುವ ಮೂಲಕ ಧೋನಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಪ್ರಮುಖ ಸಿಕ್ಸರ್‌ಗಳ ಪಟ್ಟಿಯಲ್ಲಿ 4 ನೇ ಸ್ಥಾನ ತಲುಪಿದರು. ಆಡಿದ 253 ಐಪಿಎಲ್ ಪಂದ್ಯಗಳಲ್ಲಿ ಧೋನಿ 242 ಸಿಕ್ಸರ್ ಸಿಡಿಸಿದ್ದಾರೆ. 240 ಐಪಿಎಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 241 ಸಿಕ್ಸರ್ ಸಿಡಿಸಿದ್ದಾರೆ. ಕ್ರಿಸ್ ಗೇಲ್ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಹೊಂದಿದ್ದಾರೆ. 142 ಪಂದ್ಯಗಳಲ್ಲಿ 357 ಗರಿಷ್ಠ ಸಿಕ್ಸರ್ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಇಲ್ಲಿಯವರೆಗೆ 245 ಪಂದ್ಯಗಳಲ್ಲಿ 261 ಸಿಕ್ಸರ್ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.


















