ಬಳ್ಳಾರಿ: ಹೊಲದಲ್ಲಿ ಚಿರತೆ ದಾಳಿ ನಡೆದಿದ್ದು, 21 ಕುರಿಗಳು ಸಾವನ್ನಪ್ಪಿರುವ ಘಟನೆ ಬಳ್ಳಾರಿ ತಾಲೂಕಿನ ಸಂಜೀವತಾಯನಕೋಟೆ ಗ್ರಾಮದ ಹತ್ತಿರ ನಡೆದಿದೆ.
ರಾತ್ರಿ ವೇಳೆ ಹೊಲದಲ್ಲಿ ಮಲಗಿದ್ದ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿದ್ದು, 21 ಕುರಿಗಳನ್ನ ಸಾಯಿಸಿ 2 ಕುರಿ ಹೊತ್ತೊಯ್ದಿದೆ. ರೈತ ಸಣ್ಣ ತಿಮ್ಮಪ್ಪ ಎಂಬುವವರ 21 ಕುರಿಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿ ಕಳೆದುಕೊಂಡ ರೈತ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಮನವಿ ಮಾಡುತ್ತಿದ್ದಾರೆ.