ಮಹಿಳಾ ಪ್ರೀಮಿಯರ್ ಲೀಗ್ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಸೋಲು ಕಂಡಿದ್ದು, ಅಂತಿಮ ಪಂದ್ಯದಲ್ಲಿ ಗೆದ್ದು ಡೆಲ್ಲಿ ನೇರವಾಗಿ ಫೈನಲ್ ಪ್ರವೇಶಿಸಿದೆ.
ಇನ್ನೊಂದೆಡೆ ಕೊನೆಯ ಪಂದ್ಯದಲ್ಲಿಯೂ ಸೋತ ಗುಜರಾತ್ ತಂಡ ಸತತ ಎರಡನೇ ಬಾರಿಗೆ ಟೂರ್ನಿಯಂದ ಗುಂಪು ಹಂತದಲ್ಲಿಯೇ ಹೊರಗೆ ಹೋಗಿದೆ. ಟಾಸ್ ಗೆದ್ದ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಮಾತ್ರ ಗಳಿಸಿತು. ಗುರಿ ಬೆನ್ನಟ್ಟಿದ ತಂಡ 13.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡ ದಡ ಮುಟ್ಟಿದೆ.
ನಾಯಕಿ ಮೆಗ್ ಲ್ಯಾನಿಂಗ್ 18 ರನ್, ಶಫಾಲಿ ವರ್ಮಾ 71 ರನ್, ಜೆಮಿಮಾ ರಾಡ್ರಿಗಸ್ ಕೂಡ ಅಜೇಯ 38 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್ ತಂಡಕ್ಕೆ ಕಳಪೆ ಆರಂಭ ಸಿಕ್ಕಿತ್ತು. ನಾಯಕಿ ಬೆತ್ ಮೂನಿ ಈ ಬಾರಿ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯ ಔಟ್ ಆದರು. ಲಾರಾ ವೊಲ್ವಾರ್ಡ್ಟ್ 7 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಹೇಮಲತಾ 4 ರನ್ ಗಳಿಸಿದರು. ಭಾರತಿ ಫುಲ್ಮಾಲಿ 42 ರನ್ಗಳ ಕಾಣಿಕೆ ನೀಡಿದರು. ಕ್ಯಾಥರಿನ್ ಎಮ್ಮಾ ಬ್ರೈಸ್ ಕೂಡ 28, ಫೋಬೆ ಲಿಚ್ಫೀಲ್ಡ್ 21 ರನ್ ಗಳಿಸಿದರು. ಹೀಗಾಗಿ ತಂಡ ಅಲ್ಪ ಮೊತ್ತ ಗಳಿಸಿತು.