ಚಿಕ್ಕಮಗಳೂರು: ಕ್ರೈಸ್ತ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ಬರಗಾಲ ಬಿದ್ದಿದೆ. ನಿಮ್ಮ ದೇವರು ಏನೂ ಮಾಡುವುದಿಲ್ಲ. ಮಳೆ-ಬೆಳೆ ಇಲ್ಲ. ಜನ ಸಂಕಷ್ಟದಲ್ಲಿ ಇದ್ದಾರೆ. ನೀವು ಕಷ್ಟದಲ್ಲಿ ಇದ್ದೀರಾ. ನಮ್ಮ ಧರ್ಮಕ್ಕೆ ಬಂದರೆ ಯೇಸು ಒಳ್ಳೆಯದನ್ನು ಮಾಡುತ್ತಾನೆ. ಮಳೆ-ಬೆಳೆ ಆಗಲಿದೆ. ನಿಮ್ಮ ಕಷ್ಟ ಬಗೆಹರಿಸುತ್ತಾನೆ ಎಂದು ಮತಾಂತರಕ್ಕೆ ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ.
ತಾಲೂಕಿನ ಎರೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದವರ ವಿರುದ್ದ ಹಿಂದೂಗಳು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಮೂವರ ಪೈಕಿ ಓರ್ವ ಅಪ್ರಾಪ್ತ ಹಿಂದೂ ಎನ್ನಲಾಗಿದೆ. ರಾಜನ್ ಎಂಬ ಹಿಂದೂ ವ್ಯಕ್ತಿಯೊಂದಿಗೆ ಇಬ್ಬರು ಕ್ರೈಸ್ತರು ಸೇರಿಕೊಂಡು ಇಂದಾವರ, ಉಂಡೇದಾಸರಹಳ್ಳಿ, ಎರೇಹಳ್ಳಿಯ ಮನೆಗಳಿಗೆ ತೆರಳಿ ಮತಾಂತರ ಸೆಳೆಯಲು ಮುಂದಾಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಹೋಗಿ ಮೂವರನ್ನು ಬಂಧಿಸಿದ್ದಾರೆ.


















