ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನ ಟಿಕೆಟ್ ಫೈನಲ್ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ. ಗೌತಮ್ ಕಣಕ್ಕೆ ಇಳಿಯಲಿದ್ದಾರೆ.
ಕೆ.ವಿ ಗೌತಮ್ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಎರಡು ಬಣಗಳ ನಡುವಿನ ಜಗಳಕ್ಕೆ ಬ್ರೇಕ್ ಹಾಕಿದೆ. ಸಚಿವ ಮುನಿಯಪ್ಪ ಮತ್ತು ಉಳಿದ ನಾಯಕರ ಗಲಾಟೆಯ ಹಿನ್ನೆಲೆಯಲ್ಲಿ 3ನೇ ವ್ಯಕ್ತಿಗೆ ಅದೃಷ್ಟ ಒಲಿದಂತಾಗಿದೆ.
ಸಚಿವ ಎಂಸಿ ಸುಧಾಕರ್ ಈ ಕುರಿತು ಮಾತನಾಡಿ, ಹೈಕಮಾಂಡ್ ಘೋಷಣೆ ಮಾಡಿದ ಅಭ್ಯರ್ಥಿಗೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಹೈಕಮಾಂಡ್ ಜಗಳಕ್ಕೆ ತೆರೆ ಎಳೆದಿದೆ.