ಚಂಡೀಗಢ: ಸಾಧಿಸುವ ಛಲ ಹಾಗೂ ಆತ್ಮವಿಶ್ವಾಸವೊಂದಿದ್ದರೆ ಮನುಷ್ಯ ಏನೂ ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆ ಸಿಕ್ಕಿದೆ.
ಇಲ್ಲಿ 9 ವರ್ಷದ ಬಾಲಕಿ ಬರೋಬ್ಬರಿ 75 ಕೆಜಿ ತೂಕ ಎತ್ತುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಹರಿಯಾಣದ ಪಂಚಕುಲದ 9 ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ಎಂಬ ಬಾಲಕಿಯೇ ವೇಟ್ ಲಿಫ್ಟಿಂಗ್ ನಲ್ಲಿ ಬರೊಬ್ಬರಿ 75 ಕೆ.ಜಿ ತೂಕ ಎತ್ತುವ ಮೂಲಕ ಎಲ್ಲರ ಅಚ್ಚರಿಕೆ ಕಾರಣಳಾಗಿದ್ದಾಳೆ.
ಬಾಲಕಿ ಅರ್ಷಿಯಾ 75 ಕೆ.ಜಿ ತೂಕ ಎತ್ತುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಈ ಬಾಲಕಿ ತನ್ನ ಆರನೇ ವಯಸ್ಸಿನಲ್ಲಿ ಅಂದರೆ, 2021 ರಲ್ಲಿ 45 ಕೆ.ಜಿ ಭಾರ ಎತ್ತುವ ಮೂಲಕ ಅತ್ಯಂತ ಕಿರಿಯ ಲಿಫ್ಟರ್ ಎಂಬ ದಾಖಲೆ ಮಾಡಿದ್ದಳು. ಈಗ ಬಾಲಕಿ ತನ್ನ ದಾಖಲೆ ಮುರಿದು, ಹೊಸ ದಾಖಲೆ ಬರೆದಿದ್ದಾಳೆ. ಬಾಲಕಿಯ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.