ಹೀಗಂತ ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದು, ಒಂದು ಕಾಲಕ್ಕೆ ಜೆಡಿಎಸ್ ಅಲ್ಲೇ ಇದ್ದು, ಗೆಳೆಯರಂತಿದ್ದ ಚೆಲುವರಾಯಸ್ವಾಮಿ. ಕಾರಣ, ಪೆನ್ ಡ್ರೈವ್ ಪ್ರಕರಣದಲ್ಲಿ ಮಾತನಾಡುವಾಗ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಅವರಿಗೆ “ನನ್ನನ್ನ ಕೆಣಕಲು ಬರಬೇಡಿ; ಎಲ್ಲವನ್ನೂ ಬಿಚ್ಚಿಬಿಡ್ತೀನಿ.” ಎಂದಿದ್ದರು. ಈ ವಿಚಾರಕ್ಕೆ ಇಂದು ಚೆಲುವರಾಯಸ್ವಾಮಿ ಮಾಧ್ಯಮದ ಮುಂದೆ ಕುಮಾರಸ್ವಾಮಿಗೆ ಮಾತಿನ ಚಾಟಿ ಬೀಸಿದರು.
ಸದ್ಯ ಕಾಂಗ್ರೆಸ್ಸಿನ ಪ್ರಬಲ ಡಿಕೆಶಿ ಜೊತೆ ಗುರುತಿಸಿಕೊಂಡಿರುವ ಸಚಿವ ಚೆಲುವರಾಯಸ್ವಾಮಿ, ಶಿವಮೊಗ್ಗದಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರೀಯಿಸಿ ಕುಮಾರಸ್ವಾಮಿಯ ಕಾಲೆಳೆದರು. ಡಿಕೆಶಿ ಪರ ಬ್ಯಾಟ್ ಬೀಸಿದ ಚೆಲುವರಾಯಸ್ವಾಮಿ “ನನ್ನ ಹತ್ತಿರ ಪೆನ್ ಡ್ರೈವ್ ಇದೆ” ಎನ್ನುತ್ತಾ ಬೆದರಿಸುವ ಬದಲು; ಏನಿದೆ ಎಲ್ಲಾ ಬಹಿರಂಗ ಪಡಿಸಲಿ. ‘ಕುಮಾರಸ್ವಾಮಿಯ ಬಳಿ ಏನಿದೆ ಎಲ್ಲವನ್ನೂ ಬಿಚ್ಚಿಡಲಿ’ ಎಂದು, ಖುದ್ದು ಡಿಕೆ ಶಿವಕುಮಾರ್ ಅವರೇ ಹೇಳಿದ್ದರು. ಸದನದಲ್ಲಿ ಚರ್ಚೆಯಾಗಲಿ. ಇವೆಲ್ಲಾ ಅಲ್ಲಿ ದಾಖಲಾಗಬೇಕೆಂದು ಆವರೇ ಸವಾಲು ಹಾಕಿರುವಾಗ, ಇವರ ಬಳಿ ಇರುವುದೆಲ್ಲವನ್ನೂ ಬಿಚ್ಚಿಡಲಿ”. ಎಂದರು.
“ಕುಮಾರಸ್ವಾಮಿಯವರೇ, ಪದೇ-ಪದೇ ನನ್ನನ್ನ ಕೆಣಕಬೇಡಿ ಅಂತೀರಲ್ಲ; ನೀವೇನು ನಾಗರ ಹಾವಾ? ಹೆಬ್ಬಾವಾ? ಎಂದು ವ್ಯಂಗ್ಯವಾಡಿದರು. ಡಿಕೆ ಶಿವಕುಮಾರ್ ಏನು ಕಮ್ಮಿ ಇಲ್ಲ. ನಿಮಗಿಂತ ನೂರು ಪಟ್ಟು ಹೆಚ್ಚು ಹೋರಾಟ ಮಾಡಿ ಬಂದವರು. ಅವರ ಬಗ್ಗೆ ಮಾತನಾಡುವಾಗ ಸ್ವಲ್ಪ ನೋಡಿ ಮಾತಾಡಿ. ಲಘುವಾಗಿ ಮಾತಾಡಬೇಡಿ” ಎಂದು ಕುಮಾರಸ್ವಾಮಿಗೆ ಎಚ್ಚರಿಸಿದರು.