ಮಂಡ್ಯ: ಕುಮಾರಸ್ವಾಮಿ ಅಭಿಮಾನಿಯೊಬ್ಬರು ಚುನಾವಣೆ ಖರ್ಚಿಗಾಗಿ 500 ರೂ. ನೀಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನವಣಾ ಪ್ರಚಾರವನ್ನು ಕುಮಾರಸ್ವಾಮಿ ಆರಂಭಿಸಿದ್ದಾರೆ. ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಚುನಾವಣಾ ಖರ್ಚಿಗಾಗಿ ಕಾರ್ಯಕರ್ತನೊಬ್ಬ 500 ರೂ. ದುಡ್ಡು ಕೊಟ್ಟಿದ್ದಾರೆ.
ಅಭಿಮಾನಿ ಹನಕೆರೆ ಗ್ರಾಮದ ಜೋಗಪ್ಪ ಎಂಬುವವರೇ ಚುನಾವಣಾ ಖರ್ಚಿಗೆ ಹಣ ನೀಡಿದವರು. ಅಲ್ಲದೇ, ತಮ್ಮ ನೆಚ್ಚಿನ ರಾಜಕಾರಣಿ ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಮಂಡ್ಯದ ಖಾಸಗಿ ಹೋಟೆಲ್‌ಗೆ ಹೆಚ್‌ಡಿಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಕಾಲಿಗೆ ಬಿದ್ದು ಜೋಗಪ್ಪ ಹಣ ನೀಡಿದ್ದಾರೆ. ನೀವು ಕೇಂದ್ರದಲ್ಲಿ ಮಿನಿಸ್ಟರ್ ಆಗಬೇಕು ಎಂದು ಹೇಳಿದ್ದಾರೆ.