
ಕರ್ನಾಟಕದಲ್ಲಿ ಎರಡನೇ ಹಂತದ ಮತದಾನಕ್ಕೆ ವೇದಿಕೆ ಸಜ್ದಾಗುತ್ತಿರುವ ಈ ಹೊತ್ತಲ್ಲಿ, ರಣಕಣ ರಂಗೇರಿಸಲು ಮತ್ತೊಮ್ಮೆ ಮೋದಿ ರಾಜ್ಯಕ್ಕೆ ಭೇಟಿಕೊಟ್ಟು ಮತಯಾಚನೆ ಮಾಡಿದರು. ಇದೇ ಸಮಯಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ “ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ನಮೋ ಭಾರತವಾಗಲಿದೆ” ಎಂದರು.
ಕಾಂಗ್ರೇಸ್ಸಿನವರು ಕೆಳ ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಈ ಬಾರಿ ಅಧಿಕೃತವಾಗಿ ವಿರೋಧ ಪಕ್ಷದಲ್ಲಿ ಕೂರುವುದಕ್ಕೂ ಅವಕಾಶ ಇಲ್ಲದಂತಾಗಲಿದೆ. ಇವರ ಮೈತ್ರಿಕೂಟ (ಘಟಬಂಧನ್) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎರುಡು ಸಾವಿರದ ನಲವತ್ತೇಳರ ಅಭಿವೃದ್ಧಿ ಹೊಂದಿದ ‘ಮುಂಚೂಣಿ ಭಾರತ’ದ ಕನಸು ಕಾಣುತ್ತಿರುವ ನರೇಂದ್ರ ಮೋದಿಯವರು, ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕಿದೆ. ಆ ನಿಟ್ಟಲ್ಲಿ ನಾವು ಕಾರ್ಯೋನ್ಮುಖರಾಗಬೇಕಿದೆ” ಎಂದರು. “ಕಾಂಗ್ರೇಸ್ ಪಕ್ಷದಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ; ಜೀವ ಕಾಪಾಡುವ ಗ್ಯಾರಂಟಿ ಅಂದ್ರೇ; ಅದು ಮೋದಿ ಗ್ಯಾರಂಟಿ. ಲೋಕಸಭೆಯಲ್ಲಿ ‘ನಾನೂರು ಸೀಟು’ ಪಡೆಯಲು ನಾಳೆಯಿಂದ ನಿಮ್ಮ ಶಕ್ತಿ ಕೇಂದ್ರ (ಬೂತ್ ಮಟ್ಟ)ದಲ್ಲಿ ಕೆಲಸ ಮಾಡಿರಿ” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.