ದೆಹಲಿ: ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದೆ.
ತಮಿಳುನಾಡು ಹಾಗೂ ರಾಜಸ್ಥಾನದಿಂದ ಐವರು ಅಭ್ಯರ್ಥಿಗಳನ್ನು ಹೆಸರಿಸಿದೆ. ಇತ್ತೀಚಿನ ಪಟ್ಟಿಯಲ್ಲಿ ಅಜ್ಮೀರ್‌ಗೆ ರಾಮಚಂದ್ರ ಚೌಧರಿ, ರಾಜ್ ಸಮಂದ್ ಗೆ ಸುದರ್ಶನ್ ರಾವತ್, ಭಿಲ್ವಾರಕ್ಕೆ ಡಾ. ದಾಮೋದರ್ ಗುರ್ಜರ್, ರಾಜಸ್ಥಾನದ ಕೋಟಾದಿಂದ ಪ್ರಹ್ಲಾದ್ ಗುಂಜಾಲ್ ಕಣಕ್ಕಿಳಿಯಲಿದ್ದಾರೆ. ಸಿ. ರಾಬರ್ಟ್ ಬ್ರೂಸ್ ತಮಿಳುನಾಡಿನ ತಿರುನಲ್ವೇಲಿ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಮೂವರು ಅಭ್ಯರ್ಥಿಗಳನ್ನು ಒಳಗೊಂಡಿರುವ ಕಾಂಗ್ರೆಸ್ ತನ್ನ ಐದನೇ ಪಟ್ಟಿಯನ್ನು ಭಾನುವಾರ ಬಹಿರಂಗಪಡಿಸಿತ್ತು. ಈಗ 6ನೇ ಪಟ್ಟಿ ಪ್ರಕಟಿಸಿದೆ.
ಇನ್ನೊಂದೆಡೆ ನಿನ್ನೆಯಷ್ಟೇ ಬಿಜೆಪಿ ತನ್ನ ಐದನೇ ಪಟ್ಟಿ ಬಿಡುಗಡೆ ಮಾಡಿತ್ತು. ಕಂಗನಾ ರಣಾವತ್, ಮೇನಕಾ ಗಾಂಧಿ, ಅರುಣ್ ಗೋವಿಲ್ ಮತ್ತು ನವೀನ್ ಜಿಂದಾಲ್ ಇರುವ ಪಟ್ಟಿ ಬಿಡುಗಡೆ ಮಾಡಿತ್ತು.
ಬಿಜೆಪಿ 543 ರಲ್ಲಿ 291 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಮೊದಲೇ ಘೋಷಿಸಿತ್ತು. 543 ಕ್ಷೇತ್ರಗಳನ್ನು ಒಳಗೊಂಡಿರುವ ಸಂಸತ್ತಿನ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದೆ, ಚುನಾವಣೆ 19 ರಿಂದ ಪ್ರಾರಂಭವಾಗಿ ಜೂನ್ 1 ರಂದು ಮುಗಿಯುತ್ತದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್ ಇಲ್ಲಿಯವರೆಗೆ 190 ಅಭ್ಯರ್ಥಿಗಳ ಹೆಸರು ಘೋಷಿಸಿದರೆ, ಬಿಜೆಪಿ 330 ಅಭ್ಯರ್ಥಿಗಳನ್ನು ಘೋಷಿಸಿದೆ.