ನವದೆಹಲಿ: ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ನ ಮುದ್ರೆ ಇದೆ. ಎಡಪಂಥೀಯರ ಪ್ರಾಬಲ್ಯ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.
ಸಹರಾನ್ ಪುರದಲ್ಲಿ ಚುನಾವಣಾ ರ‍್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್‌ನಲ್ಲಿ ಪ್ರಚಲಿತದಲ್ಲಿದ್ದ ಚಿಂತನೆಗಳನ್ನೇ ಕಾಂಗ್ರೆಸ್ ನ ಪ್ರಣಾಳಿಕೆ ಬಿಂಬಿಸುತ್ತದೆ. ಪ್ರಣಾಳಿಕೆಯ ಉಳಿದ ಭಾಗವು ಎಡಪಂಥೀಯರ ಪ್ರಾಬಲ್ಯ ಹೊಂದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ 370ಕ್ಕೂ ಅಧಿಕ ಸೀಟ್ ಗೆಲ್ಲುವುದನ್ನು ತಡೆಯಲು I.N.D.I.A ಮೈತ್ರಿಕೂಟ ಹೋರಾಟ ಮಾಡುತ್ತಿದೆ. ಸಮಾಜವಾದಿ ಪಕ್ಷವು ಪ್ರತಿ ಗಂಟೆಗೆ ಅಭ್ಯರ್ಥಿಗಳನ್ನು ಬದಲಾಯಿಸುತ್ತಿದೆ. ಕಾಂಗ್ರೆಸ್ ಗಂತೂ ಅಭ್ಯರ್ಥಿಗಳೇ ಸಿಗುತ್ತಿಲ್ಲ. I.N.D.I.A ಒಕ್ಕೂಟವು ಅಸ್ಥಿರತೆ ಮತ್ತು ಅನಿಶ್ಚಿತತೆಗೆ ಸಮಾನಾರ್ಥಕವಾಗಿದೆ ಮತ್ತು ದೇಶದ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹೇಳಇದ್ದಾರೆ.
ಏಪ್ರಿಲ್ 19 ರಂದು ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಉತ್ತರ ಪ್ರದೇಶದ 8 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.