ಚೆನ್ನೈ: ದೇಶದಲ್ಲಿ ಚುನಾವಣಾ ಕಣ ರಂಗೇರಿದ್ದು, ತಮಿಳುನಾಡಿನ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ.
ಇಡೀ ದೇಶದಲ್ಲಿಯೇ ಚರ್ಚಿತರಾಗಿರುವ ಹಾಗೂ ಕೇಂದ್ರ ಬಿಂದುವಾಗಿರುವ ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.
ನ್ನೈ ದಕ್ಷಿಣದಿಂದ ತೆಲಂಗಾಣದ ಮಾಜಿ ಗವರ್ನರ್ ತಮಿಳುಸಾಯಿ ಸೌಂದರರಾಜನ್, ಕನ್ಯಾಕುಮಾರಿಯಿಂದ ಪೊನ್ ರಾಧಾಕೃಷ್ಣನ್, ತೂತುಕ್ಕುಡಿಯಿಂದ ನೈನಾರ್ ನಾಗೇಂದ್ರನ್ ಕಣಕ್ಕೆ ಇಳಿಯಲಿದ್ದಾರೆ. ವೆಲ್ಲೂರಿನಿಂದ ಪುದಿಯ ನೀಧಿ ಕಚ್ಚಿ (ಪಿಎನ್‌ಕೆ) ಮುಖ್ಯಸ್ಥ ಎಸಿ ಷಣ್ಮುಗಂ, ತಮಿಳುನಾಡಿನ ಪೆರಂಬಲೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಟಿಆರ್ ಪರಿವೇಂದರ್ ಗೆ ಟಿಕೆಟ್ ಸಿಕ್ಕಿದೆ.
ತಮಿಳುನಾಡಿನ 39 ಸ್ಥಾನಗಳ ಪೈಕಿ 20ರಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಸೀಟು ಹಂಚಿಕೆ ಒಪ್ಪಂದದಲ್ಲಿ ಬಿಜೆಪಿಗೆ 20, ಪಿಎಂಕೆಗೆ 10, ಟಿಎಂಸಿಗೆ 3, ಎಎಂಎಂಕೆಗೆ 2, ಐಜೆಕೆ, ಎನ್‌ಜೆಪಿ ಸೇರಿದಂತೆ ಇನ್ನಿತರ ಎರಡು ಸಣ್ಣ ಪಕ್ಷಗಳಿಗೆ ತಲಾ ಒಂದು ಕ್ಷೇತ್ರ ಹಂಚಿಕೆ ಮಾಡಲಾಗಿದೆ. ಮಾಜಿ ಮಿತ್ರಪಕ್ಷ ಎಐಎಡಿಎಂಕೆ ಜೊತೆ ಮಾತುಕತೆ ವಿಫಲವಾದ ನಂತರ ಈ ಹೊಂದಾಣಿಕೆಯಾಗಿದೆ.