ಪಂಜಾಬ್: ಕಲಬೆರಕೆ ಮದ್ಯ ಸೇವಿಸಿದ ಪರಿಣಾಮ 21 ಜನ ಸಾವನ್ನಪ್ಪಿರುವ ಘಟನೆ ಪಂಜಾಬ್ ನ ಹಾಡಿ ಸಂಗ್ರೂರ್ ನಲ್ಲಿ ನಡೆದಿದೆ.
ಸಾವನ್ನಪ್ಪಿದವರೆಲ್ಲ ಎಥೆನಾಲ್ ವುಳ್ಳ ಮದ್ಯ ಸೇವಿಸಿದ್ದರಿಂದಾಗಿ ಈ ಘಟನೆ ನಡೆದಿದೆ. ಅಲ್ಲದೇ, ಇನ್ನೂ 40ಕ್ಕೂ ಅಧಿಕ ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಪಂಜಾಬ್ ಸರ್ಕಾರ, ತನಿಖೆಗೆ ಸೂಚಿಸಿದೆ. ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಕೂಡ ಬಂಧಿಸಲಾಗಿದೆ.
ಪಂಜಾಬ್‌ನ ಹಾಡಿ ಸಂಗ್ರೂರ್ ಜಿಲ್ಲೆಯ ಹಲವು ಗ್ರಾಮಗಳ ಜನರೇ ಮದ್ಯ ಸೇವಿಸಿದ್ದಾರೆ. ಹೀಗಾಗಿ ಒಂದೇ ದಿನ ನಾಲ್ವರು ಸಾವನ್ನಪ್ಪಿದ್ದಾರೆ. ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮರುದಿನ ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಶುಕ್ರವಾರ 8 ಹಾಗೂ ಶನಿವಾರ ಐವರು ಸಾವನ್ನಪ್ಪಿದ್ದಾರೆ. 40 ಜನ ತೀವ್ರ ಅಸ್ವಸ್ಥರಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರೂ ಕೂಲಿ ಕಾರ್ಮಿಕರು ಎನ್ನಲಾಗಿದೆ. ಇವರೆಲ್ಲ ಸೇವಿಸಿದ ಮದ್ಯದಲ್ಲಿ ಮೆಥನಾಲ್ ಇರುವ ಹಿನ್ನೆಲೆಯಲ್ಲಿ ಹೀಗಾಗಿ ಎಂಬುವುದು ತನಿಖೆಯಿಂದ ಬಯಲಾಗಿದೆ.