ಚಾಮರಾಜನಗರ: ಕಾಡಾನೆ ದಾಳಿಗೆ ಬಲಿಯಾಗಿದ್ದ ಕೇರಳದ ವ್ಯಕ್ತಿ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತ ಕುಟುಂಬ ತಿರಸ್ಕರಿಸಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಬಂಡೀಪುರದಲ್ಲಿ ಮಾತನಾಡಿದ ಅವರು, ನಾವು ಆ ಕುಟುಂಬಕ್ಕೆ ಮಾನವೀಯತೆಯಿಂದ ಪರಿಹಾರ ಘೋಷಿಸಿದ್ದೇವು. ಆದರೆ, ಸಂತ್ರಸ್ತ ಕುಟುಂಬವು ಪರಿಹಾರ ಬೇಡವೆಂತು ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ಮಾನವೀಯತೆಯಿಂದ ಪರಿಹಾರ ಘೋಷಿಸಿದ್ದಕ್ಕೆ ಬಿಜೆಪಿ ವಿರೋಧಿಸಿತ್ತು. ವಿರೋಧ ಮಾಡಿದ್ದರಿಂದಾಗಿ ನಮಗೆ ಪರಿಹಾರ ಬೇಕಿಲ್ಲ ಎಂದು ಆ ಕುಟುಂಬ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ನಮ್ಮ ಆನೆಗೆ ನಾವು ರೇಡಿಯೋ ಕಾಲರ್ ಹಾಕಿದ್ದೆವು. ಆ ಆನೆ ಬಂಡೀಪುರದಿಂದ ಕೇರಳದ ವೈನಾಡಿಗೆ ಹೋಗಿತ್ತು. ಅಲ್ಲಿ ಆನೆ ತುಳಿತಕ್ಕೆ ಅಜೀಶ್ ಎಂಬ ಬಲಿಯಾಗಿದ್ದರು. ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ಸಿಎಂ ಅನುಮೋದನೆ ಪಡೆದು ಪರಿಹಾರ ಘೋಷಿಸಲಾಗಿತ್ತು ಎಂದು ಹೇಳಿದ್ದಾರೆ.