ಕರಾವಳಿ ಭಾಗದ ಮೀನುಗಾರರ ಬದುಕು-ಬವಣೆಯ ಕಥೆ ಹೊತ್ತು ತಯಾರಾದ ‘ಮತ್ಸ್ಯಗಂಧ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ನಿಯಕ ಪೃಥ್ವಿ ಅಂಬರ್ , ನಿರ್ದೇಶಕ ದೇವರಾಜ್ ಪೂಜಾರಿ, ನಟ-ಸಂಗೀತ ನಿರ್ದೇಶಕ ಪ್ರಶಾಂತ್ ಸಿದ್ಧಿ, ನಟ ನಾಗರಾಜ್ ಬೈಂದೂರು ಸೇರೀದಂತೆ ಕರಾವಳಿಗರೇ ಹೆಚ್ಚಾಗಿ ಕೂಡಿಕೊಂಡಿರೋ ತಂಡದಿಂದ ಈ ಮತ್ಸ್ಯಗಂಧ ತಯಾರಾಗಿದ್ದು, ಇದೇ ಇಪ್ಪತ್ಮೂರಕ್ಕೆ ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ.
ಸಹ್ಯಾದ್ರಿ ಪ್ರೊಡಕ್ಷನ್ ಬ್ಯಾನರಿನಡಿ ಬಿ ಏಸ್ ವಿಶ್ವನಾಥ್ ನಿರ್ಮಿಸಿರುವ ಮತ್ಸ್ಯಗಂಧ ಚಿತ್ರವು, ಕರಾವಳಿ ಸಂಬಂಧಿಸಿದ ಉತ್ತರಕನ್ನಡದ ಮೀನುಗಾರರ ನಡುವಿನಲ್ಲಿ ನಡೆಯುವ ಕಥಾ ಹಂದರ ಹೊಂದಿದ್ದು, ಚಿತ್ರಕ್ಕೆ ಪ್ರವೀಣ್ ಪ್ರಭು ಛಾಯಾಗ್ರಹಣ, ಪ್ರಶಾಂತ್ ಸಿದ್ಧಿ ಸಂಗೀತ, ಶ್ರೀನಿವಾಸ್ ಕಲಾಲ್ ಸಂಕಲನವಿದೆ. ತಾರಾಗಣದಲ್ಲಿ ಪೃಥ್ವಿ ಅಂಬರ್ ಜೊತೆ ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ನಾಗರಾಜ್ ಬೈಂದೂರ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.
ಕರಾವಳಿ ಭಾಗದ ದೇಸೀ ಸೊಗಡಿನ ‘ಮತ್ಸ್ಯಗಂಧ’ ಚಿತ್ರವು ತನ್ನ ಕಥಾ ವಸ್ತುವಿನ ವಿಶೇಷತೆಯೊಂದಿಗೆ ಚಿತ್ರದ ಮೇಲೊಂದು ಗಟ್ಟಿ ನಿರೀಕ್ಷೆ ಇಡುವಂತೆ ಸದ್ದು ಮಾಡುತ್ತಿದೆ. ಕಂಟೆಂಟ್ ಹೊಂದಿದ ಚಿತ್ರಗಳು ಇತ್ತೀಚೆಗೆ ಕೈ ಹಿಡಿಯುತ್ತಿದ್ದು, ಅದರಲ್ಲೂ ಕರಾವಳಿ ಸೊಗಡಿನ ಸಿನಿಮಾಗಳು ತುಸು ಹೆಚ್ಚೇ ಜನಾಕರ್ಷಣೆಗೊಳ್ಳುತ್ತಿವೆ. ಅದೇ ಥರದಲ್ಲಿ ತಯಾರಾದ ಮತ್ಸ್ಯಗಂಧದ ಮೇಲೂ ಸಹಜವಾಗೇ ನಿರೀಕ್ಷೆ ಇಡಲಾಗಿದೆ. ಈಗಾಗಲೇ ಬಿಡುಗಡೆ ಕಂಡಿರುವ ಹಾಡುಗಳು ಸದ್ದು ಮಾಡಿಕೊಂಡಿವೆ. ಬಿಡುಗಡೆಯಾಗಿರುವ ಟ್ರೈಲರ್ ಚಿತ್ರದ ಮೇಲೆ ಬಲು ಭರವಸೆ ಇಡುವಂತೆ ಮೂಡಿ ಬಂದಿದ್ದು, ಚಿತ್ರದ ಫಲಿತಾಂಶಕ್ಕಾಗಿ ಇಪ್ಪತ್ಮೂರರವರೆಗೂ ಕಾಯಬೇಕಿದೆ.