ಚಂದನವನದ ಕನಸುಗಾರ ರವಿಚಂದ್ರನ್ ಮತ್ತೊಂದು ಸಿನಿಮಾದ ಕುರಿತು ಮಾಹಿತಿ ನೀಡಿದ್ದಾರೆ.
ಸದ್ಯ ರವಿಚಂದ್ರನ್ ತಪಸ್ವಿ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಬೆಂಗಳೂರು ಮೂವೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸ್ಪೆನ್ಸರ್ ಮ್ಯಾಥ್ಯೂ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ. ರವಿಚಂದ್ರನ್ ಅವರಿಂದಲೇ ಈ ಸಿನಿಮಾದ ಕೆಲಸ ಆರಂಭ ಆಗಿದೆ. ಸಿನಿಮಾದಲ್ಲಿ ಒಂದು ಗಟ್ಟಿಯಾದ ಸಂದೇಶ ಇದೆ.
ಜನರಿಗೆ ಆ ಮೆಸೇಜ್ ರೀಚ್ ಆಗಬೇಕೆಂದರೆ ರವಿಚಂದ್ರನ್ ಅವರಂತಹ ವ್ಯಕ್ತಿ ಬಿಟ್ಟು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎನಿಸಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರದ ನಿರ್ದೇಶಕರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅಮೈರಾ ಗೋಸ್ವಾಮಿ ನಾಯಕಿಯಾಗಿದ್ದಾರೆ. ಪ್ರಜ್ವಲ್, ವಿನಯಾ ಪ್ರಸಾದ್, ಸಚಿನ್, ಭಾಸ್ಕರ್, ಅನುಷಾ ಕಿಣಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.