ನವದೆಹಲಿ: ತೀವ್ರ ಹಾಗೂ ಕಡು ಬಡತನ ತೊಡೆದು ಹಾಕುವಲ್ಲಿ ಭಾರತ ಯಶಸ್ವಿಯಾಗುತ್ತಿದೆ. ಅಂಕಿ- ಅಂಶಗಳೇ ಇದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
10 ವರ್ಷ ಅವಧಿಯ ಬಡತನ ಸಂಬಂಧಿತ ಸಮೀಕ್ಷೆ ಆಧಾರಿತ ಮಾಹಿತಿ ಹೊರ ಬಿದ್ದಿದ್ದು, ಭಾರತವು ಅನುಭೋಗಿ ಅಥವಾ ಬಳಕೆಯ ವೆಚ್ಚಗಳನ್ನು ಅಂದಾಜು ಮಾಡಲು ಎರಡು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿದೆ. ಅವುಗಳು ಯೂನಿಫಾರ್ಮ್ ರಿಕಾಲ್ ಪಿರಿಯಡ್ ಮತ್ತು ಅಕ್ಯುರೇಟ್ ಮಾಡಿಫೈಡ್ ಮಿಕ್ಸೆಡ್ ರಿಕಾಲ್ ಪಿರಿಯಡ್ ಆಗಿವೆ.
30 ದಿನಗಳ ಅವಧಿಗೆ ಕುಟುಂಬಗಳು ಮಾಡಿದ ವೆಚ್ಚದ ಕುರಿತು ಕೇಳಿದ ಪ್ರಶ್ನೆಗಳಿಗೆ ದೊರೆತ ಉತ್ತರದ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ವಿಶ್ವಬ್ಯಾಂಕ್ ನಿಗದಿಪಡಿಸಿದ ಮಾನದಂಡದ ಪ್ರಕಾರ ಬಡತನದ ಅಂದಾಜು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ವಿಶ್ವಬ್ಯಾಂಕ್ ಅಂದಾಜಿಸಿರುವ ಅಂಕಿ ಅಂಶಗಳಂತೆ ಸಮೀಕ್ಷೆಯಲ್ಲಿ ಭಾರತದ ಬಡವರ ಸಂಖ್ಯೆಯು ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುವುದನ್ನು ದತ್ತಾಂಶ ತಿಳಿಸಿವೆ.