ಹುಬ್ಬಳ್ಳಿ: ವಿದ್ಯಾರ್ಥಿಗಳು ಒಂದಿಲ್ಲೊಂದು ಏನಾದರೂ ಕಿಡಿಗೇಡಿತನ ಮಾಡುವ ವಿಡಿಯೋ ವೈರಲ್ ಆಗುತ್ತಿರುತ್ತವೆ. ವ್ಹೀಲಿಂಗ್ ಪುಂಡರ ಹಾವಳಿಗೆ ಎಲ್ಲರೂ ಬೇಸತ್ತಿದ್ದರು. ಇದರ ಮಧ್ಯೆ ಈಗ ಒಂದೇ ಬೈಕ್ ನಲ್ಲಿಯೇ ಐವರು ವಿದ್ಯಾರ್ಥಿಗಳು ಹೋಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಗೋಕುಲ ರಸ್ತೆ ಹತ್ತಿರ ಒಂದೇ ಬೈಕ್ ನಲ್ಲಿ ಐವರು ವಿದ್ಯಾರ್ಥಿಗಳು ತೆರಳುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. KA 25 Y5077 ನಂಬರ್ ಪ್ಲೇಟ್ ನ ಬೈಕ್ ನಲ್ಲಿ ಐವರು ವಿದ್ಯಾರ್ಥಿಗಳು ಸಂಚರಿಸಿದ್ದಾರೆ. ಅಲ್ಲದೇ, ಓರ್ವ ವಿದ್ಯಾರ್ಥಿಯನ್ನು ಬಲವಂತವಾಗಿ ಅಡ್ಡ ಮಲಗಿಸಿ ಚಲಾಯಿಸಿದ್ದಾರೆ. ಈ ಹುಚ್ಚಾಟ ಮೊಬೈಲ್ ನಲ್ಲಿ ಸೆರೆಯಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.