ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಶ(ಬಿಐಎಸ್) ಹಾಗೂ ಗೂಡ್ಸ್ ಸರ್ವಿಸ್ ಟ್ಯಾಕ್ಸ್ ( ಜಿಎಸ್ಟಿ ) ಅಧಿಕಾರಿಗಳ ಸೋಗಿಲಳನಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿ ಸುಮಾರು ಎಂಬತ್ತೈದು ಲಕ್ಷ ಮೌಲ್ಯದ ಆಭರಣ ದೋಚಿ ಪರಾರಿ ಗೈದವರನ್ನ ಕೆ. ಆರ್. ಪುರ ಪೋಲೀಸರು ಕೇವಲ ಒಂದೇ ಗಂಟೆಯಲ್ಲಿ ಹಿಡಿಯುವ ಮೂಲಕ ದರೋಡೆಕೋರರ ದುಸ್ವಪ್ನವಾದರು.
ಅಸಲಿಗೆ ಜನವರಿ ಇಪ್ಪತ್ತೆಳನೇ ತಾರೀಕು ಮಧ್ಯಾಹ್ನ ಕೆ.ಆರಾ. ಪುರ ಠಾಣಾ ಸರಹದ್ದಿನ ಭಟ್ಟರ ಹಳ್ಳಿಯ ಮಹಾಲಕ್ಷ್ಮೀ ಜ್ಯುವೆಲ್ಲರ್ಸ್ ಮೇಲೆ ಅಟ್ಯಾಕ್ ಮಾಡಿದ ಬಂಧಿತ ಸಂಪತ್(55), ಕುಮಾರ್, ಥಾಮಸ್(54), ಸಂದೀಪ್ ಶರ್ಮಾ(48), ಅವಿನಾಶ್ ಕುಮಾರ್(27 ) ಅಧಿಕಾರಿಗಳ ಸೋಗಲ್ಲಿ ನುಗ್ಗಿ, ಹೆದರಿಸಿ ಆಭರಣ ದೋಚಿ ಪರಾರಿಯಾಗಿದ್ದರು. ಮೊದಲು ತಾವು ಬಿಐಎಸ್ ಮತ್ತು ಜಿಎಸ್ಟಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಿಚಾರಣೆ ನಡೆಸಿದ ಖದೀಮರು ಮಳಿಗೆಯವರ ಫೋನ್ ಕಸಿದುಕೊಂಡು ಸ್ವಿಚ್ ಆಫ್ ಮಾಡಿ, ಮಳಿಗೆಯ ಬಾಗಿಲು ಮುಚ್ಚಿದರು. ಮಳಿಗೆಯಲ್ಲಿ ಹಾಲ್ ಮಾರ್ಕ್ ಇಲ್ಲದ ಸುಮಾರು ಒಂದು ಕೆಜಿ ಇನ್ನೂರ ನಲವತ್ತೆಂಟು ಗ್ರಾಮ್ ತೂಕದ ಆಭರಣಗಳನ್ನು ವಶ ಪಡಿಸಿಕೊಂಡಂತೆ ಮಾಡಿ, ವಿಚಾರಣೆಗಾಗಿ ಚೆನೈ ಆಫೀಸಿಗೆ ಬರುವಂತೆ ವಾರ್ನಿಂಗ್ ಮಾಡಿ ಕಾಲ್ಕಿತ್ತಿದ್ದರು. ಈ ವೇಳೆ ಸಿಕ್ಕಿ ಬೀಳುವ ಭಯದಲ್ಲಿ ಸಿಸಿಟಿವಿ ಡಿವಿಆರ್ ಅನ್ನು ತೆಗೆದುಕೊಂಡು ಹೋಗಿದ್ದು ಮಳಿಗೆ ಸಿಬ್ಬಂದಿ ಹೇಮರಾಜ್ ಅನುಮಾನ ಹೆಚ್ಚಿಸಿದೆ. ತಕ್ಷಣವೇ ದರೋಡೆಕೋರರ ಕಾರು ಹಿಂಬಾಲಿಸಿದರಾದರೂ, ಖದೀಮರು ಹೇಮರಾಜ್ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಈ ದಾರಿ ಮಧ್ಯೆ ಪೊಲೀಸರಿಗೆ ಹೇಮರಾಜ್ ಕೆ.ಆರ್. ಪುರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಎರಡೂವರೆ ಕಿಲೋಮೀಟರಿಗೂ ಹೆಚ್ಚು ದೂರ ಚೇಸ್ ಮಾಡಿ ಖದೀಮರ ಹೆಡೆಮುರಿಗೆ ಕಟ್ಟಿ ತಂದು , ಚಿನ್ನಾಭರಣ ಜಪ್ತಿ ಮಾಡಿದರು.