ಪ್ರಸಕ್ತ ಸಾಲಿನ ಐಪಿಎಲ್ ಹಂಗಾಮ ಇಂದಿನಿಂದ ಆರಂಭವಾಗಲಿದೆ. ಹಲವು ತಂಡಗಳು ಹೊಸ ನಾಯಕರೊಂದಿಗೆ ಕಣಕ್ಕೆ ಇಳಿಯಲು ಸಿದ್ಧವಾಗಿವೆ.
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದು, ತಂಡದ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ನಾಯಕತ್ವ ವಹಿಸಿದ್ದಾರೆ. ಧೋನಿ 2008 ರಿಂದಲೂ ಧೋನಿ ಈ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ತಂಡ 5 ಬಾರಿ ಗೆಲುವು ಸಾಧಿಸಿತ್ತು.
ಹೀಗಾಗಿ ಧೋನಿ, ಯಶಸ್ವಿ ನಾಯಕ ಎಂದು ಕರೆಯಿಸಿಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ಟಿ20 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಆಟಗಾರ ಎಂಬ ದಾಖಲೆಯೂ ಧೋನಿ ಹೆಸರಿನಲ್ಲಿದೆ. ಧೋನಿ ಇದುವರೆಗೆ 322 ಪಂದ್ಯಗಳಲ್ಲಿ ತಮ್ಮ ತಂಡ ಮುನ್ನಡೆಸಿದ್ದಾರೆ.
ಈ 322 ಪಂದ್ಯಗಳಲ್ಲಿ 189 ಪಂದ್ಯಗಳಲ್ಲಿ ತಂಡ ಗೆಲುವು ಸಾಧಿಸಿದೆ. ಧೋನಿ ಗರಿಷ್ಠ 9 ಫೈನಲ್‌ಗಳನ್ನು ಗೆದ್ದ ನಾಯಕ ಕೂಡ ಆಗಿದ್ದಾರೆ. ಧೋನಿ ಭಾರತ ಟಿ20 ತಂಡದ ನಾಯಕನಾಗಿ 2007 ರ ಟಿ20 ವಿಶ್ವಕಪ್ ಮತ್ತು 2016 ರ ಏಷ್ಯಾಕಪ್ ಗೆದ್ದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 14 ವರ್ಷಗಳಲ್ಲಿ 212 ಐಪಿಎಲ್ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುನ್ನಡೆಸಿದ್ದಾರೆ. ಚಾಂಪಿಯನ್ಸ್ ಲೀಗ್‌ನ 23 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದಾರೆ.
235 ಪಂದ್ಯಗಳಲ್ಲಿ ಚೆನ್ನೈ 142 ಪಂದ್ಯಗಳನ್ನು ಗೆದ್ದಿದ್ದರೆ, 90 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಯಾಗಿವೆ. ಧೋನಿ ಗೆಲುವಿನ ಶೇಕಡಾವಾರು 60.42 ಆಗಿದೆ. ಧೋನಿ ನಾಯಕರಾಗಿದ್ದಾಗ 14 ಐಪಿಎಲ್ ಸೀಸನ್ ಗಳಲ್ಲಿ 12 ಬಾರಿ ಪ್ಲೇ ಆಫ್ ತಲುಪಿದೆ. 2020 ಮತ್ತು 2022 ರಲ್ಲಿ ಮಾತ್ರ ತಂಡ ಪ್ಲೇ ಆಫ್ ಪ್ರವೇಶಿಸಿಲ್ಲ.