ದಿನೇ-ದಿನೇ ಪ್ರಜ್ವಲ್ ‘ರೇವಣ್ಣ ಲೈಂಗಿಕ ಹಗರಣ’ದ ಕಾವು ಹೆಚ್ಚುತ್ತಿದ್ದು, ‘ಎಸ್ಐಟಿ’ ನಿನ್ನೆ ಸಂಜೆ ಎಚ್ಡಿ ರೇವಣ್ಣ ಮನೆಗೆ ನೋಟಿಸ್ ಅಂಟಿಸಿ ಬಂದಿದೆ. ಮತ್ತು ಇಂದು ವಿಚಾರಣೆಗೆ ಹಾಜರಿರುವಂತೆ ತಿಳಿಸಲಾಗುವುದ ಎನ್ನಲಾಗಿದೆ.
ಸುಮಾರು ಎರಡು ಸಾವಿರದ ಎಂಟುನೂರಕ್ಕೂ ಹೆಚ್ಚು ಲೈಂಗಿಕ ವಿಡಿಯೋ ಗಳಿವೆ ಎನ್ನಲಾದ ‘ಪೆನ್ ಡ್ರೈವ್’ ಪ್ರಕರಣದಲ್ಲಿ ರೇವಣ್ಣ ಕುಟುಂಬ ತಲೆ ಎತ್ತದಂತಾಗಿಹೋಗಿದೆ. ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ನಡುವೆ ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ರೇವಣ್ಣ ತಂಡವನ್ನು ವಿಚಾರಣೆಗೆ ಕರೆದಿದೆ ಎನ್ನಲಾಗಿದೆ.
ಇವತ್ತು ಬೆಳಿಗ್ಗೆ ಹೊಳೆ ನರಸೀಪುರದ ಮನೆಯಲ್ಲಿ ರೇವಣ್ಣ ಹೋಮ-ಹವನ ನಡೆಸಿ ಒಂದಷ್ಟು ಒತ್ತಡ ನಿವಾರಣೆಗೆ, ಮನ:ಶಾಂತಿಗೆ ಪ್ರಯತ್ನಿಸುತ್ತಿದ್ದರು. ಇದೇ ವೇಳೆಗೆ ಇತ್ತ ತನಿಖಾ ತಂಡ ಮನೆಗೆ ನೋಟಿಸಿ ಅಂಟಿಸಿದ್ದ ಬಗ್ಗೆ ಕೇಳಲು ಮಾಧ್ಯಮ ಹೋಗಿದೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತಾಡಿದ ರೇವಣ್ಣ, “ಎಸ್ಐಟಿ ನೋಟಿಸ್ ಅಂಟಿಸಿ ಹೋಗಿದ್ದರ ಬಗ್ಗೆ ಹೇಳಿದರು. ಏನೇ ಬಂದರೂ ಎದುರಿಸುತ್ತೇವೆ. ಎಲ್ಲವೂ ಸರಿಹೋಗಲಿದೆ.” ಎಂದರು.
ಏನೇ ಹೇಳಿದರೂ, ಅಷ್ಟು ಸುಲಭಕ್ಕೆ ಸುಧಾರಿಸಿಕೊಳ್ಳುವ ಪ್ರಕರಣ ಇದಲ್ಲ ಎಂಬುದು ಖುದ್ದು ರೇವಣ್ಣಗೆ ಗೊತ್ತಿದೆ. ಹಗಣದ ಗಂಭೀರತೆ ಅರಿತಿರುವ ಇವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಂತಿದೆ. ಈ ಬಗ್ಗೆ ಬಿ.ಕೆ.ಸಿಂಗ್ ನೇತೃತ್ವದ ವಿಶೇಷ ತನಿಖಾ ದಳಕ್ಕೆ ಗೊತ್ತಿಲ್ಲದಿಲ್ಲ. ಬಿಟ್ಟು ಹಿಡಿವ ಪ್ರಯತ್ನದಲ್ಲಿ ತಂಡವಿದ್ದಂತಿದೆ. ಕಾದುನೋಡೋಣ.