ಎಸ್! ಇದು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಿಬು ನಾಯ್ಡುವಿನ ಉವಾಚ. ಸದ್ಯ ಆಂಧ್ರದ ನೆಲ್ಲೂರಿನ ಬಳಿ ಲೋಕಸಭಾ ಚುನಾವಣಾ ಪ್ರಚಾರದ ಹುರುಪಲ್ಲಿದ್ದ ಟಿಡಿಪಿ ಪಕ್ಷದ ನೇತಾರ ಚಂದ್ರಬಾಬು ನಾಯ್ಡು, ಓಲೈಕೆ ರಾಜಕಾರಣದತ್ತ ಮುಖ ಮಾಡಿದ ಪರಿ ಇದು. ನಿಜಕ್ಕೂ ಈ ಮಟ್ಟದ ಮುಸಲ್ಮಾಪರ ಓಲೈಕೆಗಳು ಬಿಜೆಪಿ ಸಿದ್ಧಾಂತಕ್ಕೆ ಸರಿ ಹೊಂದುವಂತದ್ದಲ್ಲ ಎಂಬುದು ಪಡಸಾಲೆಯಿಂದ ಕೇಳಿ ಬರುತ್ತಿರುವ ಮಾತು.
ಅದೇನೇ ಇರಲಿ, ಇಂದು ನೆಲ್ಲೂರಿನ ಬಳಿ ಪ್ರಚಾರದ ವೇಳೆ ಮಾತಾಡಿದ ಚಂದ್ರಬಿಬು ನಾಯ್ಡು, ಬಿಜೆಪಿ,ಟಿಡಿಪಿ,ಜನಸೇನಾ ಮೈತ್ರಿಯ ಪಕ್ಷ ಅಧಿಕಾರಕ್ಕೆ ಬಂದೊಡನೆಯೇ, ಪ್ರತಿಯೊಬ್ಬ ಮುಸಲ್ಮಾನರಿಗೂ ಮೆಕ್ಕಾ ಯಾತ್ರೆಗೆ ತೆರಳಲು ಒಂದು ಲಕ್ಷ ರೂಪಾಯಿ ಸಹಾಯ ಧನ ನೀಡಲಾಗುವುದು ಮತ್ತು ಮುಸಲ್ಮಾನರ ಈದ್ ಹಬ್ಬವನ್ನು ನಾಡ ಹಬ್ಬವೆಂದು ಘೋಷಿಸಲಾಗುವುದು”ಎಂದರು. ಹಾಗೆಯೇ ಹೈದರಾಬಾದ್ ಮುಸಲ್ಮಾನರು ಬೇರೆ ಕಡೆಗಳಿಗಿಂತ ಮುಂದುವರೆದವರು ಎಂದು ಹೊಗಳಿದರು. ಈ ಹಿಂದೆ ನಮ್ಮ ಸರ್ಕಾರ ಹಜ್ ಭವನ ನಿರ್ಮಿಸಿ ಮುಸಲ್ಮಾನರ ಜೊತೆ ನಿಂತಿತ್ತು; ಈಗಿನ ಜಗನ್ ಸರ್ಕಾರ ಮುಸಲ್ಮಾನರಿಗಾಗಿ ಒಂದೇ ಒಂದು ಮಸೀದಿ ಕೂಡ ಕಟ್ಟಲಿಲ್ಲ” ಎಂದು ಹರಿಹಾಯ್ದರು.
ಏನೇ ಆದರೂ, ಚಂದ್ರಬಾಬು ನಾಯ್ಡುವಿನ ಈ ಮಾತುಗಳು ಸಂಘ ಪರಿವಾರದ ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದ್ದಂತೂ ಸುಳ್ಳಲ್ಲ.
