ನಟ ದರ್ಶನ್ ಅವರು ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಲೋಕಸಭೆ ಚುನಾವಣೆಗೆ ಸುಮಲತಾ ಪರ ಪ್ರಚಾರ ಮಾಡುವ ಕುರಿತು ಪ್ರತಿಕ್ರಿಯಿಸಿದ್ದಾರೆ. ಅವರು ಈ ಬಾರಿಯೂ ಸುಮಲತಾ ಪರ ಪ್ರಚಾರಕ್ಕೆ ಸಾಥ್ ನೀಡುವುದಾಗಿ ತಿಳಿಸಿದ್ದಾರೆ.
2019ರಲ್ಲಿ ನಡೆದ ಲೋಕಸಭಾ ಎಲೆಕ್ಷನ್‌ನಲ್ಲಿ ಸುಮಲತಾ ಮಂಡ್ಯದಲ್ಲಿ ನಿಂತು ಗೆದ್ದು ಗೆಲುವು ಸಾಧಿಸಿದ್ದರು. ಯಶ್-ದರ್ಶನ್ ಜೋಡೆತ್ತುಗಳಾಗಿ ಪರ ಪ್ರಚಾರ ಮಾಡಿದ್ದರು. ಈ ಪ್ರಚಾರದಲ್ಲಿ ಯಶಸ್ಸು ಕೂಡ ಸಾಧಿಸಿದ್ದರು. ಸದ್ಯ ಪ್ರಚಾರದ ಕುರಿತು ದರ್ಶನ್ ಮಾತನಾಡಿದ್ದಾರೆ.
ಈ ಕುರಿತು ಪ್ರಶ್ನಿಸಿದಾಗ, ಹೆತ್ತ ತಾಯಿನ ಎಂದಾದರೂ ಬಿಟ್ಟು ಕೊಡೋಕೆ ಆಗುತ್ತಾ ಎಂದಿದ್ದಾರೆ. ಮೊನ್ನೆವರೆಗೂ ಎಲ್ಲಾ ಸುಮಲತಾ ಅಮ್ಮನ ಜೊತೆ ಇದ್ದೆ. ಮುಂದೆಯೂ ಇರುತ್ತೇನೆ. ಅವರ ಕೈ ಬಿಟ್ರೆ ಆಗುತ್ತಾ ಎಂದಿದ್ದಾರೆ.

