ಬೀದರ್: ಬಿತ್ತನೆ ಬೀಜದ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಕೋಟ್ಯಾಂತರ ರೂ. ಮೌಲ್ಯದ ನಷ್ಟ ಸಂಭವಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಬಗದಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈರುಳ್ಳಿ ಬೀಜ ಸಂಗ್ರಹ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 1 ಕೋಟಿ ರೂ.ಗೂ ಅಧಿಕ ಮೌಲ್ಯದ ಬೀಜ ಸುಟ್ಟು ಕರಕಲಾಗಿವೆ. ಬಗದಲ್ ಗ್ರಾಮದ ಬಾಕಿ ಸೇಠ್‌ಗೆ ಸೇರಿದ ಈರುಳ್ಳಿ ಗೋದಾಮು ಇದಾಗಿದ್ದು, ರೈತರಿಂದ ಈರುಳ್ಳಿ ಬೀಜ ಖರಿದೀಸಿ ಸಂಗ್ರಹಿಸಿಟ್ಟಿದ್ದರು. ಆದರೆ, ಅಗ್ನಿ ಅವಘಡದಿಂದ ಈ ದುರ್ಘಟನೆ ನಡೆದಿದ್ದು, ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.