ದಳಪತಿ ವಿಜಯ್ ಅಭಿಮಾನಿಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಅವರ ಚಿತ್ರಗಳೆಂದರೆ ಹುಚ್ಚೆದ್ದು ನೋಡುತ್ತಾರೆ. ಸದ್ಯ ಅವರು ಪೇಮೆಂಟ್ ನಿಂದ ಸುದ್ದಿಯಾಗಿದ್ದಾರೆ.
ದಳಪತಿ ವೆಂಕಟ್ ಪ್ರಭು ನಿರ್ದೇಶದ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’( GOAT’ ) ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ 68ನೇ ಚಿತ್ರ. 69ನೇ ಚಿತ್ರ ಕೊನೆಯದಾಗಲಿದೆ ಎನ್ನಲಾಗುತ್ತಿದೆ. ಈ ಚಿತ್ರದ ಅಭಿನಯಕ್ಕಾಗಿ ಬರೋಬ್ಬರಿ 250 ಕೋಟಿ ರೂಪಾಯಿ ಪಡೆಯಲಿದ್ದಾರೆ ಎಂದು ವರದಿ ಆಗಿದೆ.
ವಿಜಯ್ ಸಿನಿಮಾಗೆ ಹೆಚ್ಚಿನ ಬೇಡಿಕೆ. ‘ಲಿಯೋ’ ಚಿತ್ರ ವಿಮರ್ಶೆಯಲ್ಲಿ ಸೋತ ಹೊರತಾಗಿಯೂ ವಿಶ್ವಾದ್ಯಂತ 600 ಕೋಟಿ ರೂಪಾಯಿ ಮಾಡಿತ್ತು. ಇದರೊಂದಿಗೆ ಟಿವಿ ಹಾಗೂ ಒಟಿಟಿ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗುತ್ತವೆ. ಈ ಕಾರಣದಿಂದಲೇ ವಿಜಯ್ ಗೆ ದೊಡ್ಡ ಸಂಭಾವನೆ ನೀಡಲು ನಿರ್ಮಾಪಕರು ಮುಂದೆ ಬರುತ್ತಾರೆ.
ವಿಜಯ್ ಪ್ರತಿ ಚಿತ್ರಕ್ಕೆ 150 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ‘GOAT’ ಚಿತ್ರದಲ್ಲಿ ಅವರದ್ದು ದ್ವಿಪಾತ್ರ. ಹೀಗಾಗಿ ಅವರು ಬರೋಬ್ಬರಿ 200 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇನ್ನೂ ಅವರ ಕೊನೆಯ ಚಿತ್ರಕ್ಕೆ 250 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
‘ಆರ್ ಆರ್ ಆರ್’ ಚಿತ್ರವನ್ನು ನಿರ್ಮಾಣ ಮಾಡಿದ್ದ ಡಿವಿವಿ ದಾನಯ್ಯ ಈ ದೊಡ್ಡ ಬಜೆಟ್ ಚಿತ್ರ ಮಾಡಲು ಮುಂದೆ ಬಂದಿದ್ದಾರೆ. ಎಚ್. ವಿನೋದ್ ಅಥವಾ ಅಟ್ಲಿ ನಿರ್ದೇಶನ ಮಾಡಬಹುದು ಎಂದು ಸುದ್ದಿ ಹರಿದಾಡುತ್ತಿದೆ.