ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಅಲ್ಲಿನ ವಿಕ್ಟೋರಿಯಾದ ಬಕ್ಲಿಯಲ್ಲಿ ರಸ್ತೆ ಬದಿಯ ಡಬ್ಬಿಯೊಂದರಲ್ಲಿ ಭಾರತದ ಹೈದರಾಬಾದ್ ಮೂಲದ ಮಹಿಳೆಯ ಶವ ಪತ್ತೆಯಾಗಿದೆ. ಪತಿಯೇ ಈ ಮಹಿಳೆಯನ್ನು ಹತ್ಯೆ ಮಾಡಿರುಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಚೈತನ್ಯ ಮದಗಣಿ ಸಾವನ್ನಪ್ಪಿದ ಮಹಿಳೆ ಎನ್ನಲಾಗಿದೆ. ಇವರು ಪತಿ ಹಾಗೂ ಮಗುವಿನೊಂದಿಗೆ ವಾಸಿಸುತ್ತಿದ್ದರು. ಪತಿ ಶ್ವೇತಾಳನ್ನು ಹತ್ಯೆ ಮಾಡಿದ ನಂತರ ಮಗುವಿನೊಂದಿಗೆ ಹೈದರಾಬಾದ್ ಗೆ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತದೇಹವನ್ನು ಹೈದರಾಬಾದ್‍ಗೆ ತರಲು ವಿದೇಶಾಂಗ ಕಚೇರಿಗೆ ಸ್ಥಳೀಯ ಶಾಸಕರು ಪತ್ರ ಬರೆದಿದ್ದಾರೆ. ಅಳಿಯನೇ ತಮ್ಮ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಸದ್ಯ ಅಲ್ಲಿನ ವಿಕ್ಟೋರಿಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.