ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ತೀವ್ರ ರೋಚಕತೆ ಪಡೆದಿದೆ. ಈಗಾಗಲೇ 16 ಪಂದ್ಯಗಳು ಮುಗಿದಿದ್ದು, ಮುಂಬೈ ಪ್ಲೇ ಆಫ್ ಪ್ರವೇಶಿಸಿದೆ. ಡೆಲ್ಲಿ ಕೂಡ ಬಹುತೇಕ ಪ್ರವೇಶಿಸಿದಂತಾಗಿದೆ. ಈಗ ಮೂರನೇ ಸ್ಥಾನಕ್ಕೆ ಪೈಪೋಟಿ ನಡೆದಿದೆ.
ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ಗೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 7 ವಿಕೆಟ್ಗಳ ರೋಚಕ ಜಯ ಕಂಡಿತು. ಆಗ ಪಾಯಿಂಟ್ಸ್ ಟೇಬಲ್ ಬದಲಾವಣೆ ಆಗಿದೆ.
ಮುಂಬೈ ತಂಡ ಗೆಲ್ಲುವ ಮೂಲಕ ಅಗ್ರಸ್ಥಾನಕ್ಕೇರಿದೆ. ಹಾಗೆಯೆ ನಾಕೌಟ್ ಹಂತ ತಲುಪಿದೆ. ಆಡಿರುವ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಹಾಗೂ ಎರಡು ಪಂದ್ಯದಲ್ಲಿ ಸೋಲುಂಡು 10 ಅಂಕ ಸಂಪಾದಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ಇವರು ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಕೇವಲ ಎರಡರಲ್ಲಿ ಸೋಲು ಕಂಡಿದೆ.
ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿದ್ದು, ನಾಕೌಟ್ ಹಾದಿ ಕಷ್ಟಕರವಾಗಿದೆ. ಆಡಿರುವ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡು ಆರ್ಸಿಬಿ ಒಟ್ಟು 6 ಅಂಕ ಸಂಪಾದಿಸಿದೆ. ಯುಪಿ ವಾರಿಯರ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಏಳು ಪಂದ್ಯಗಳಲ್ಲಿ ನಾಲ್ಕು ಸೋಲು ಮತ್ತು ಮೂರು ಗೆಲುವು ಕಂಡು 6 ಅಂಕ ಪಡೆದಿದೆ. ಕೊನೆಯ ಪಂದ್ಯ ಗೆದ್ದು, ಆರ್ ಸಿಬಿ ಇನ್ನುಳಿದ ಪಂದ್ಯಗಳಲ್ಲಿ ಸೋತರೆ ಈ ತಂಡಕ್ಕೆ ಪ್ಲೇ ಆಫ್ ಹೋಗುವ ಹಾದಿ ಸುಗಮ. ಒಂದು ವೇಳೆ ಆರ್ ಸಿಬಿ ಒಂದು ಗೆದ್ದು, ಇದು ಸೋತರೆ ಕಷ್ಟ. ಇದು ಕೊನೆಯ ಪಂದ್ಯ ಗೆದ್ದು, ಆರ್ ಸಿಬಿ ಕೂಡ ಒಂದು ಪಂದ್ಯ ಗೆದ್ದರೆ ರನ್ ರೇಟ್ ಆಧಾರವಾಗಿ ನಿಲ್ಲುತ್ತದೆ.
ಗುಜರಾತ್ ಗೈಂಟ್ಸ್ ತಂಡದ ಸ್ಥಿತಿ ಉತ್ತಮವಾಗಿಲ್ಲ. ಆಡಿರುವ ಆರು ಪಂದ್ಯಗಳ ಪೈಕಿ ಐದರಲ್ಲಿ ಸೋತಿದ್ದು, ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸಿ 2 ಅಂಕ ಪಡೆದಿದೆ.