ಆನ್ ಲೈನ್ ಮೋಸದ ಕುರಿತು ಎಷ್ಟೇ ಜಾಗೃತಿ ವಹಿಸಿದರೂ ಹಲವರು ವಂಚನೆಗೊಳಗಾಗುತ್ತಲೇ ಇದ್ದಾರೆ. ಸದ್ಯ ಈ ಸಾಲಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಬಂದಿದ್ದು, ಒಂದು ಕ್ಲಿಕ್ ಮಾಡಿ 2 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಕೀರ್ತಿ ಭಟ್ ಈ ರೀತಿ ಹಣ ಕಳೆದುಕೊಂಡಿದ್ದು, ತಮಗಾದ ಮೋಸವನ್ನು ತಾವೇ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಮಾಡಿ ಪೊಲೀಸರ ಎದುರು ಕಣ್ಣೀರು ಸುರಿಸಿದ್ದಾರೆ. ಕೀರ್ತಿ ಭಟ್ ಗೆ ಕೊರಿಯರ್ ಬರಬೇಕಿತ್ತು. ವಾರ ಕಳೆದರೂ ಬಂದಿಲ್ಲ. ವಿಚಾರಿಸಲೆಂದೇ ಕೇಂದ್ರ ಕಚೇರಿಕೆ ಕರೆ ಮಾಡಿದ್ದಾರೆ. ಡೆಲಿವರಿ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಟ್ರ್ಯಾಕ್ ಮಾಡಿದಾಗ ಅದು ಮೆಹದಿಪಟ್ನಂನಲ್ಲಿ ಇರುವುದು ತಿಳಿದು ಬಂದಿದೆ.
ಕೊರಿಯರ್ ಸರ್ವಿಸ್ ಎಂದುಕೊಂಡು ಕೀರ್ತಿಗೆ ಕಾಲ್ ಮಾಡಿದ್ದಾರೆ.
ನಿಮ್ಮ ಅಡ್ರೆಸ್ ಟ್ರ್ಯಾಕ್ ಆಗದಿರುವ ಕಾರಣಕ್ಕೆ ಪಾರ್ಸಲ್ ತಲುಪಿಲ್ಲ ಎಂದು ಹೇಳಲಿದ್ದಾರೆ. ಸರಿಯಾದ ಅಡ್ರೆಸ್ ವಾಟ್ಸಪ್ ಮಾಡಿ ಅಂದಿದ್ದಾರೆ. ಅವರು ಹೇಳಿದಂತೆ ಕೀರ್ತಿ ವಿಳಾಸ ನೀಡಿದ್ದಾರೆ. ವಾಟ್ಸಪ್ ನಲ್ಲೂ ಅದು ತೋರಿಸ್ತಿಲ್ಲ. ನಾರ್ಮಲ್ ಮಸೇಜ್ ಕಳುಹಿಸುತ್ತೇವೆ. ಅಲ್ಲಿ ಕ್ಲಿಕ್ ಮಾಡಿ ಅಂದಿದ್ದಾರೆ. ನಾರ್ಮಲ್ ಮಸೇಜ್ ಕ್ಲಿಕ್ ಮಾಡಿದಾಗ ಹಣ ಕ್ರಿಮಿನಲ್ ಖಾತೆಗೆ ವರ್ಗಾವಣೆಯಾಗಿದೆ. ಈ ಕುರಿತು ಕೀರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಕಣ್ಣೀರು ಸುರಿಸಿದ್ದಾರೆ.