ಚಂದನವನದ ನಟ ಶ್ರೀಮುರಳಿ ದಂಪತಿ ಕಾರು ತಡವಾಗುತ್ತದೆ ಎಂಬ ಕಾರಣಕ್ಕೆ ಆಟೋದಲ್ಲಿಯೇ ಮನೆಗೆ ಹೋಗಿರುವ ಸುದ್ದಿ ವೈರಲ್ ಆಗಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ, ಪತ್ನಿ ವಿದ್ಯಾ ನಗರದಲ್ಲಿ ಸೋಮವಾರ ಆಟೋ ಸವಾರಿ ಮಾಡಿದ್ದಾರೆ. ಈ ದಂಪತಿಯ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆಟೋ ಸಿಗದೇ ನಡೆದು ನಡೆದು ಸಾಕಾಗಿತ್ತು. ಕಾರು ಬರೋದು ಲೇಟ್ ಆಗುತ್ತೆ ಅಂತಲೆ ನಡೆದ್ವಿ. (ನನ್ನ ಹೆಂಡತಿಗೆ ಕೋಪಾನು ಸ್ಟಾರ್ಟ್ ಆಗುತ್ತಿತ್ತು) ಆಗ ನನ್ನ ಆಪತ್ಭಾದವರಂತೇ ಇಬ್ಬರು ಹುಡುಗರು ನಮ್ಮನ್ನು ನೋಡಿ ಸಾಕಾಗಿ, ಆಟೋ ಹಿಡಿದು ನಮ್ಮ ಬಳಿ ತಂದರು. ಅವರಿಗೆ ಧನ್ಯವಾದ ಆಟೋ ಅಣ್ಣ ನಮ್ಮನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್ ಮಾಡಿದರು ಎಂದು ನಟ ಶ್ರೀಮುರಳಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಪರಾಕ್, ಬಘೀರ ಸಿನಿಮಾ ಕಾರ್ಯವನ್ನು ಮುರುಳಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ‘ಉಗ್ರಂ’ ಪಾರ್ಟ್ 2 ಬರುವ ಬಗ್ಗೆ ಪ್ರಶಾಂತ್ ನೀಲ್ ಸುಳಿವು ನೀಡಿದ್ದಾರೆ.