ಅಯೋಧ್ಯೆಯ ರಾಮ ಮಂದಿರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಕಮಾಂಡರ್ ಸ್ವತಃ ತಾನೇ ಗುಂಡು ಹಾರಿಸಿಕೊಂಡಿರುವ ಘಟನೆ ನಡೆದಿದೆ.
ಕಮಾಂಡರ್ ಆಯುಧಗಳನ್ನು ಸ್ವಚ್ಛಗೊಳಿಸುತ್ತಿರುವಾಗ ಗೊತ್ತಾಗದಂತೆ ಎಕೆ-47ನಿಂದ ಗುಂಡು ಹಾರಿಸಿಕೊಂಡಿರುವ ಘಟನೆ ನಡೆದಿದೆ. ಕೂಡಲೇ ಅವರನ್ನು ಶ್ರೀರಾಮ್ ಆಸ್ಪತ್ರೆಗೆ ಕರೆತರಲಾಯಿತು. ನಂತರ ಲಕ್ನೋದ ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. ಕಮಾಂಡರ್ ರಾಮಪ್ರಸಾದ್ (53), ಮೂಲತಃ ಅಮೇಥಿ ಜಿಲ್ಲೆಯವರು ಎನ್ನಲಾಗಿದೆ. ಇವರು ಶ್ರೀರಾಮ ಮಂದಿರದ ಸಂಕೀರ್ಣದ ಭದ್ರತೆಯಲ್ಲಿ PAC ಯ 32 ನೇ ಬೆಟಾಲಿಯನ್‌ನ ಪ್ಲಟೂನ್ ಕಮಾಂಡರ್ ಆಗಿ ನಿಯೋಜಿಸಲ್ಪಟ್ಟಿದ್ದರು.
ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸುವಾಗ ಇದ್ದಕ್ಕಿದ್ದಂತೆ ಕೈಲಿದ್ದ ಎಕೆ -47 ನಿಂದ ಗುಂಡು ಹಾರಿದೆ. ಗುಂಡು ಅವರ ಎಡ ಎದೆಗೆ ನೇರವಾಗಿ ಹೊಡೆದು, ಅದರ ಮೂಲಕ ಹಾದು ಹೋಗಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ಐಜಿ ಪ್ರವೀಣ್ ಕುಮಾರ್, ಸಿಆರ್‌ಪಿಎಫ್ ಕಮಾಂಡೆಂಟ್ ಛೋಟಾಲಾಲ್, ಎಸ್‌ಎಸ್‌ಪಿ ರಾಜಕರಣ್ ನಯ್ಯರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಇತ್ತ ಗುಂಡಿನ ಭಾರೀ ಸದ್ದಿನಿಂದಾಗಿ ರಾಮ ಮಂದಿರದಲ್ಲಿ ಕೋಲಾಹಲವೇ ಸೃಷ್ಟಿಯಾಗಿತ್ತು. ಭಕ್ತರು ಭಯಭೀತರಾಗಿದ್ದರು.