ನಮ್ಮನ್ನೆಲ್ಲ ಅಗಲಿದ ಅಪ್ಪು 49ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರಾಘವೇಂದ್ರ ರಾಜಕುಮಾರ್ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಅಪ್ಪು ಕುಟುಂಬ ಕೂಡ ಪುನೀತ್ ಸಮಾಧಿಯ ದರ್ಶನ ಪಡೆದಿದ್ದಾರೆ. ಈ ವೇಳೆ, ಪುನೀತ್ ಸ್ಥಾನವನ್ನು ಯಾರು ತುಂಬೋಕೆ ಆಗಲ್ಲ. ಯುವನನ್ನು ಬೆಳೆಸಿ, ಹರಸಿ ಎಂದು ರಾಘಣ್ಣ ರಾಘಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ನಮ್ಮೆಲ್ಲರ ಪವರ್ ಅಪ್ಪು ಅನ್ನೋ ಮ್ಯಾರಥಾನ್. ಓಡೋದು ಅಂದರೆ ಪುನೀತ್‌ಗೆ ತುಂಬಾ ಇಷ್ಟ. ಉತ್ತಮ ಆರೋಗ್ಯಕ್ಕಾಗಿ ಓಡಬೇಕು. ಅಪ್ಪು ಸ್ಫೂರ್ತಿ ದಿನವನ್ನಾಗಿ ಸರಿಯಾಗಿ ಆಚರಿಸಿ, ಇದು ಅಭಿಮಾನಿಗಳ ಹುಟ್ಟುಹಬ್ಬ ಎಂದು ರಾಘಣ್ಣ ಹೇಳಿದ್ದಾರೆ.
ಪ್ರೀತಿಯಿಂದ ಜನರಿಗೆ ಏನು ಹಂಚ್ತಿರಾ ಹಂಚಿ. ಅಲ್ಲಿ ಅಪ್ಪು ಕಾಣ್ತಾರೆ. ಸ್ಫೂರ್ತಿ ದಿನ ಬಂದರೆ ಮಕ್ಕಳು ಖುಷಿಯಾಗಬೇಕು. ಈ ದಿನವನ್ನು ಅಪ್ಪುಗಾಗಿ ಗಿಡ ನೆಡಿ, ಉಚಿತ ಶಿಕ್ಷಣ ನೀಡಿ ಸಮಾಜಮುಖಿ ಕೆಲಸ ಮಾಡಿ ಎಂದು ರಾಘಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.