ಬೆಳಗಾವಿ: ಬಾಲ್ಯವಿವಾಹ ಮಾಡಿಸುವುದು ಬೇಡ ಅಂದಿದ್ದಕ್ಕೆ ಪತ್ನಿಯ ಕಾಲನ್ನೇ ಪತಿ ಮುರಿದಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದಿದೆ. 13 ವರ್ಷದ ಮಗಳಿಗೆ ತಂದೆ ಮದುವೆ ಮಾಡಿಸಲು ಮುಂದಾದ ವೇಳೆ ತಾಯಿ ವಿರೋಧ ಮಾಡಿದ್ದಾರೆ. ಪತ್ನಿ ವಿರೋಧದಿಂದ ಆಕ್ರೋಶಗೊಂಡ ಪತಿ ಬೀರಪ್ಪ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸದ್ಯ ಪತ್ನಿ ಮಾಯವ್ವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ದೂರು ದಾಖಲಿಸಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಪತಿ ತನ್ನ ಅಣ್ಣನ ಹೆಂಡತಿ ಮನೆಯ ಹುಡಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿಸಲು ಮುಂದಾಗಿದ್ದಾನೆ. ಆದರೆ, ಪತ್ನಿ ಮಗಳನ್ನು ಚಿಕ್ಕದು. ಇನ್ನೂ ಓದಿಸೋಣ ಎಂದು ಹೇಳಿದ್ದಾರೆ. ಹುಡುಗನಿಗೆ 40 ಎಕರೆ ಜಮೀನು ಇರುವುದಕ್ಕೆ ಆತ ಮದುವೆ ಮಾಡಲು ಮುಂದಾಗಿದ್ದ ಎನ್ನಲಾಗಿದೆ. ಮುರಗೋಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.