ಅಪ್ಪು ಕಣ್ಣೆದುರು ಮರೆಯಾಗಿದ್ದರೂ ಮನದಲ್ಲಿ ಮಾತ್ರ ಅಚ್ಚಳಿಯದೇ ಉಳಿದಿದ್ದಾರೆ. ಅವರ ಹುಟ್ಟು ಹಬ್ಬದ ದಿನ್ನೆಲೆಯಲ್ಲಿ ಅಭಿಮಾನಿಗಳು ಅನ್ನಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಇಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಹೀಗಾಗಿ ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ಅಪ್ಪು ಹುಟ್ಟು ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಅಪ್ಪು ಇಲ್ಲದೇ 3ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ದೊಡ್ಮನೆ ಸದಸ್ಯರು ನೋವಿನಿಂದ ಆಚರಿಸುತ್ತಿದ್ದಾರೆ. ಅಗಲಿದ ಅರಸನಿಗೆ ಅಭಿಮಾನಿಗಳು ನಿತ್ಯವೂ ಕಣ್ಣೀರಾಭಿಷೇಕ ಮಾಡುತ್ತಿದ್ದಾರೆ. ಅಪ್ಪು ಪುಣ್ಯಭೂಮಿಯಲ್ಲಿ ಅಭಿಮಾನಿಗಳು ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸುತ್ತಾರೆ.
ಇಡೀ ದಿನ ಅನ್ನಸಂತರ್ಪಣೆ-ರಕ್ತದಾನ ಶಿಬಿರ-ಆರೋಗ್ಯ ತಪಾಸಣೆಯಂಥಹ ಅನೇಕ ಕಾರ್ಯಗಳು ನಡೆಯುತ್ತೆ. ಅಪ್ಪು ಕುಟುಂಬಸ್ಥರು ಬೆಳಗ್ಗೆ 9 ಗಂಟೆಗೆ ಸಮಾಧಿಗೆ ಆಗಮಿಸಿ ಎಡೆಇಟ್ಟು ಪೂಜೆ ಕೈಗೊಳ್ಳಲಿದ್ದಾರೆ. ಪುನೀತ್ ರಾಜ್‌ಕುಮಾರ್, ಭಾವನಾ ಮೆನನ್ ನಟನೆಯ `ಜಾಕಿ’ ಸಿನಿಮಾ ರಿಲೀಸ್ ಆಗಿ 100 ಶೋ ಹೌಸ್‌ಫುಲ್ ಆಗಿದೆ. ಈ ಚಿತ್ರ ಸದ್ಯ 1 ಕೋಟಿ ರೂ. ಗಳಿಕೆ ಮಾಡಿದೆ. ಈ ಚಿತ್ರದ ಮೂಲಕ ಮತ್ತೆ ಅಭಿಮಾನಿಗಳು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ.