ಬೆಂಗಳೂರು: ಅಕ್ಕನೊಂದಿಗೆ ಸಲುಗೆಯಿಂದ ಇದ್ದವನ ಹತ್ಯೆಗೆ ಸುಪಾರಿ ಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಹೇಮಂತ್ ರೆಡ್ಡಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ತನ್ನ ಅಕ್ಕನೊಂದಿಗೆ ಶಶಾಂಕ್ ಎಂಬ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು, ಆರೋಪಿ ಆತನ ಹತ್ಯೆಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದು ಬಂದಿದೆ. ಸುಪಾರಿ ಪಡೆದಿದ್ದ ಹಂತಕರು ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿ ಹಣ ಕೊಟ್ಟಿದ್ದು ಹೇಳಿದ್ದಾರೆ ಎನ್ನಲಾಗಿದೆ.
ಸೋಮವಾರ ರಾತ್ರಿ ವೇಳೆ ಮಾರಕಾಸ್ತ್ರ ಹಿಡಿದು, ಶಶಾಂಕ್‍ಗಾಗಿ ಚಿಕ್ಕಜಾಲ ಹತ್ತಿರದ ಗಂಟಿಗಾನಹಳ್ಳಿಯಲ್ಲಿ ಸುಪಾರಿ ಗ್ಯಾಂಗ್ ಕಾಯುತ್ತಿತ್ತು. ಆಗ ರೌಂಡ್ಸ್ ಗೆ ತೆರಳಿದ್ದ ಹೊಯ್ಸಳ ಪೊಲೀಸರು ಅರೆಸ್ಟ್ ಮಾಡಿದ್ದರು. ನಂತರ ಆರೋಪಿಗಳು ಹೇಮಂತ್ ರೆಡ್ಡಿ ಹೆಸರು ಬಾಯಿ ಬಿಟ್ಟಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.