ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆಗಿದ್ದ ಮಾಳು ನಿಪನಾಳ್ ಅವರು ಈಗ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಕ್ಯಾಪ್ಟನ್ ಆಗಿದ್ದರಿಂದ ಅವರಿಗೆ ಸಿಕ್ಕಿದ್ದ ನಾಮಿನೇಟ್ ಮಾಡುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲೆ ಬಂದಿದೆ.
ಕ್ಯಾಪ್ಟನ್ ಆದ ಬಳಿ ಹೆಚ್ಚು ಆಕ್ಟಿವ್ ಆದ ಮಾಳು ಎಲ್ಲರೊಟ್ಟಿಗೆ ಅಧಿಕಾರಯುತವಾಗಿ ಮಾತನಾಡಲು ಆರಂಭಿಸಿದರು. ಆದರೆ ಬರ ಬರುತ್ತಾ ಮಾಳು ಅವರ ಕ್ಯಾಪ್ಟನ್ಗಿರಿ ಮನೆಯವರಿಗೆ ಸರಿ ಬರಲಿಲ್ಲ. ಇದೀಗ ಕ್ಯಾಪ್ಟನ್ ಮಾಳುವನ್ನು ಮನೆಯವರೆಲ್ಲ ಸೇರಿ ಕಳಪೆ ಮಾಡಿದ್ದಾರೆ. ಕಳೆದ ವಾರ ಕ್ಯಾಪ್ಟನ್ ಆಗಿ ಮೆರೆದಾಡಿದ್ದ ಮಾಳು ಈ ವಾರ ಜೈಲು ಸೇರಿದ್ದಾರೆ.
ರಿಷಾ ಗೌಡ, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಜಾಹ್ನವಿ ಮುಂತಾದವರು ಮಾಳು ನಿಪನಾಳ್ ಅವರು ಕಳಪೆ ಪಟ್ಟ ನೀಡಿದ್ದಾರೆ. ಸರಿಯಾದ ಕಾರಣಗಳನ್ನು ನೀಡದೇ ನಾಮಿನೇಟ್ ಮಾಡಿದರು ಎಂಬ ಆರೋಪ ಆರಂಭದಿಂದಲೂ ಮಾಳು ಮೇಲೆ ಇತ್ತು. ಇದೀಗ ಕಳಪೆ ಕೊಡುವಾಗ ಅದನ್ನೇ ಹೈಲೈಟ್ ಮಾಡಿ, ಮಾಳುಗೆ ಕಳಪೆ ನೀಡಲಾಗಿದೆ.
ಇದನ್ನೂ ಓದಿ : ಬಿಬಿಕೆ 12 : ಕ್ಯಾಪ್ಟನ್ ರಘು ಟಾರ್ಚರ್ಗೆ ಸುಸ್ತಾದ ಗಿಲ್ಲಿ



















