ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಮಾತಾಡುವಾಗ ಎಚ್ಚರಿಕೆಯಿಂದ ಮಾತಾಡಲಿ ಅಂತ ವಿಪಕ್ಷ ನಾಯಕ ಅಶೋಕ್ ಅವರು ಸಚಿವ ಪ್ರಿಯಾಂಕ್ ಖರ್ಗೆಗೆ ವಾರ್ನಿಂಗ್ ನೀಡಿದ್ದಾರೆ.
ದೆಹಲಿ ಸ್ಪೋಟ ಮತ್ತು ಅಮಿತ್ ಶಾ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಬಾಂಬ್ ಸ್ಪೋಟ ವಿಚಾರದಲ್ಲಿ ಮೋದಿ ಅವರು ಸಭೆ ಮಾಡಿದ್ದಾರೆ. ಯಾರೇ ಉಗ್ರರು ಇದ್ದರೂ ಹೆಡೆಮುರಿ ಕಟ್ಟೋಕೆ ಸೂಚನೆ ನೀಡಿದ್ದಾರೆ. ಈಗಾಗಲೇ ಯಾರು ಇದ್ದಾರೆ ಅವರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ತಿದ್ದಾರೆ ಅಂತ ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಕೇಂದ್ರ ಹೋಂ ಮಿನಿಸ್ಟರ್ ಅವರನ್ನ ದುರ್ಬಲ ಅಂತಾರೆ. ಮರಿ ಖರ್ಗೆ ಅವರೇ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರು ಆಗಿದ್ದಾಗ ಕಂಬಾಲ ಪಲ್ಲಿಯಲ್ಲಿ ದಲಿತರನ್ನ ಸಜೀವ ದಹನ ಮಾಡಿದ್ರು. ಆ ಕೇಸ್ ಏನಾಯ್ತು? ಅಪರಾಧ ಮಾಡಿದ ಎಲ್ಲರೂ ನಿರಪರಾಧಿ ಅಂತ ಆಯ್ತು. ಅಂದು ಗೃಹ ಸಚಿವರಾಗಿದ್ದು ನಿಮ್ಮ ತಂದೆ. ಆವತ್ತು ಹೋಂ ಮಿನಿಸ್ಟರ್ ಆಗಿ ಫೇಲ್ ಆದ್ರು. ನೀವು ಅಮಿತ್ ಶಾ ಬಗ್ಗೆ ಮಾತಾಡೋದಾ? ಅಮಿತ್ ಶಾ ಉಗ್ರರಿಗೆ ಗುಂಡು ಹೊಡೆಯೋ ಕೆಲಸ ಮಾಡ್ತಿದ್ದಾರೆ. ನೀವು ಏನು ಮಾಡಿದ್ರಿ? ಅವರ ಪರ ಮಾತಾಡೋ ಕೆಲಸ ಮಾಡಿದ್ರಿ. ಅಮಿತ್ ಶಾ ಅವರ ಬಗ್ಗೆ ಮಾತಾಡೋ ಬಗ್ಗೆ ಎಚ್ಚರವಾಗಿ ಪ್ರಿಯಾಂಕ್ ಖರ್ಗೆ ಮಾತಾಡಲಿ ಅಂತ ಆರ್ ಅಶೋಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕಬ್ಬಿಗೆ ಬೆಲೆ ನಿಗದಿ ವಿಚಾರ | ಮುಧೋಳ, ಜಮಖಂಡಿಯಲ್ಲಿ ಭುಗಿಲೆದ್ದ ರೈತರ ಆಕ್ರೋಶ.. ರಸ್ತೆ ಬಂದ್ ಮಾಡಿ ಪ್ರೊಟೆಸ್ಟ್!



















